ಬಂಟ್ವಾಳ: ಬಂಟ್ವಾಳ ತಾಲೂಕು ಸಿದ್ಧಕಟ್ಟೆಯ ಸಂಗಬೆಟ್ಟು ಪಣಂಬೂರು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದಲ್ಲಿ ಬ್ರಹ್ಮ ಶ್ರೀ ಕುಡುಪು ನರಸಿಂಹ ತಂತ್ರಿ ಮತ್ತು ರಾಮ ಐತಾಳ ಕೊಟ್ಟಾರ ಅವರ ನೇತೃತ್ವದಲ್ಲಿ ನಡೆಯುವ ವರ್ಷಾವಧಿ ಮಹೋತ್ಸವ ಫೆ. 25 ಮತ್ತು ಫೆ.26ರಂದು ನಡೆಯಿತು.

2702pkt1
ಕ್ಷೇತ್ರದ ಪ್ರ. ಅರ್ಚಕ ಪ್ರಭಾಕರ ಐಗಳ್ ಅವರ ಸಹಕಾರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಬೆಳಗ್ಗೆ ದೇವತಾ ಪ್ರಾರ್ಥನೆ, ಸಿದ್ದಕಟ್ಟೆ ಮಹಮ್ಮಾಯಿ ಕಟ್ಟೆಯಲ್ಲಿ ಬಿಂಬ ಪ್ರತಿಷ್ಠೆ, ಚಂಡಿಕಾ ಯಾಗ, ಶ್ರೀ ದುರ್ಗಾಪರಮೇಶ್ವರಿ ಮತ್ತು ಶ್ರೀ ವೀರಭದ್ರ ಸ್ವಾಮಿಗೆ ನವಕ ಕಲಶಾಭಿಷೇಕ, ದೈವಗಳಿಗೆ ನವಕ ಕಲಶಾಭಿಷೇಕ, ಗಣ ಹೋಮ, ನಾಗದೇವರ ಸನ್ನಿ„ಯಲ್ಲಿ ಆಶ್ಲೇಷಾ ಬಲಿ, ಮಹಾ ಪೂಜೆ, ದೈವಗಳ ಭಂಡಾರ ಆರೋಹಣ, ಸಂಜೆ ಮಹಿಷಂದಾಯನ ನೇಮ ಜರಗಿತು.

2502pkt3ಫೆ.26ರಂದು ಸಂಜೆ ವಾರಾಹಿ ದೈವದ ನೇಮ, ರಂಗ ಪೂಜೆ, ಭಂಡಾರ ಅವರೋಹಣ, ಫೆ.27ರಂದು ಸಂಪೆÇ್ರೀಕ್ಷಣೆ, ಮಂಗಳ ನಡೆಯಿತು.
ಮಾಜಿ ಸಚಿವ ಬಿ. ರಮಾನಾಥ ರೈ, ಜಿ.ಪಂ.ಸದಸ್ಯರಾದ ಎಂ.ತುಂಗಪ್ಪ ಬಂಗೇರ, ಬಿ. ಪದ್ಮಶೇಖರ ಜೈನ್, ನಿವೃತ್ತ ಬ್ಯಾಂಕ್ ಅಧಿಕಾರಿ ಬೇಬಿ ಕುಂದರ್, ತಾ.ಪಂ.ಮಾಜಿ ಸದಸ್ಯ ರತ್ನಕುಮಾರ್ ಚೌಟ, ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ಸಂಗಬೆಟ್ಟು ಗ್ರಾ. ಪಂ.ಅಧ್ಯಕ್ಷೆ ಗುಲಾಬಿ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಪೂಜಾರಿ ಹಲಕ್ಕೆ, ಪಂ.ಅ.ಅಧಿಕಾರಿ ಧರ್ಮರಾಜ್, ದೇಗುಲದ ಗುರಿಕಾರರಾದ ಚಂದ್ರಹಾಸ ಗುರಿಕಾರ ಸಿದ್ದಕಟ್ಟೆ, ಪಿ.ಶ್ರೀನಿವಾಸ ಶೆಟ್ಟಿಗಾರ್ ಕಾಟಿಪಳ್ಳ, ಗಂಗಾಧರ ಗುರಿಕಾರ ಬೆಳ್ಮ, ಮಹಾಬಲ ಗುರಿಕಾರ ಹೊಕ್ಕಾಡಿಗೋಳಿ, ಮೊಕ್ತೇಸರÀರು, ಜೀರ್ಣೊದ್ಧಾರ ಸಮಿತಿ, ಭಜನ ಸಮಿತಿ, ಮಹಿಳಾ ವೇದಿಕೆ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

By Suddi9

Leave a Reply

Your email address will not be published. Required fields are marked *