ಬಂಟ್ವಾಳ:ಇಲ್ಲಿನ ಪಾಣೆಮಂಗಳೂರಿನಲ್ಲಿ ಕಳೆದ 25ವರ್ಷಗಳ ಹಿಂದೆ ಆರಂಭಗೊಂಡ ಪ್ರತಿಷ್ಠಿತ ಸುಮಂಗಲಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ 11ಮಂದಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಬಂಟ್ವಾಳ ತಾಲ್ಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ.ರಘು ಸಪಲ್ಯ ಇವರ ನೇತೃತ್ವದಲ್ಲಿ ಒಟ್ಟು 13 ಸ್ಥಾನಗಳ ಪೈಕಿ ನಾಮಪತ್ರ ಸಲ್ಲಿಸಿದ್ದ 11 ಮಂದಿ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ. ಪದ್ಮನಾಭ ಸಪಲ್ಯ ಇಡ್ಕಿದು, ಈಶ್ವರ ಆರ್.ಕೆ.ಮೆಲ್ಕಾರ್, ನಾಗೇಶ್ ಕಲ್ಲಡ್ಕ, ದಾಮೋದರ ಸಪಲ್ಯ, ಕೃಷ್ಣಪ್ಪ ಗಾಣಿಗ, ರವೀಂದ್ರ ಸಪಲ್ಯ, ಸಂದೀಪ್ ಕುಮಾರ್, ಶರತ್ ಎಚ್., ಸದಾಶಿವ ಪುತ್ರನ್, ಬಬಿತ ಸಚಿನ್ ಮೆಲ್ಕಾರ್, ಯಶೋಧ ಶಂಭೂರು ಇವರು ನಿರ್ದೇಶಕರಾಗಿ ಆಯ್ಕೆಗೊಂಡಿದ್ದಾರೆ. ಎನ್.ಜಿ.ಗೋಪಾಲ್ ಚುನಾವಣಾಧಿüಕಾರಿಯಾಗಿದ್ದರು.
