ಬಂಟ್ವಾಳ:  ಕರಾವಳಿಭಾಗದ ಭತ್ತಬೆಳೆಗಾರರಿಗೆ  ಎಕ್ಟರಿಗೆ 7,500 ರೂ.ವಿನಂತೆ ದೊರೆಯುವ ಅನುದಾನದ ಕರಾವಳಿ ಪ್ಯಾಕೇಜನ್ನು 15,000 ರೂ.ಗೆ ಹೆಚ್ಚಿಸಬೇಕೆಂದು ಒತ್ತಾಯಿಸಿ  ಕ. ರಾ. ರೈತ ಸಂಘದ ನಿಯೋಗ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
IMG-20200221-WA0021
2009ರ ಒಳಗಿನ ರೈತರ ಸಾಲವನ್ನು ಮನ್ನಾ ಮಾಡಲು ಕ್ರಮ ಕೈಗೊಳ್ಳಬೇಕು, ಹರೇಕಳಗ್ರಾಮದಲ್ಲಿ ಸರಕಾರಿ ಪರಂಬಾಕು ತೋಡಿನ ಊಳೆತ್ತಿ 200 ಎಕರೆ ಕೃಷಿ ಭೂಮಿಯನ್ನುಸಂರಕ್ಷಿಸಬೇಕಿ,ಪಾಣೆಮಂಗಳೂರು ಪರಿಸರದಲ್ಲಿ ಮಳೆ ನೀರು     ಹರಿದು ಹೋಗುವ ರಾಜಕಾಲುವೆಯ ಊಳೆತ್ತಿ ರೈತರ ಭೂಮಿ ಸಂರಕ್ಷಿಸಲು ಕ್ರಮ ಕೈಗೊಳ್ಳಬೇಕು ಸಹಿತ ವಿವಿಧ ಬೇಡಿಕೆಯ ಮನವಿಯನ್ನು ಸಚಿವರಿಗೆ ಸಲ್ಲಿಸಲಾಯಿತು.
ಹಾಗೆಯೇ ಈ ಎಲ್ಲ ಬೇಡಿಕೆಗಳ ಮನವಿಯನ್ನು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಎನ್.ಲಕ್ಷ್ಮಿನಾರಾಯಣ್ ಅವರ ಮೂಲಕ ಮುಖ್ಯಮಂತ್ರಿಯವರಿಗೂ ಮನವಿಯನ್ನು ಸಲ್ಲಿಸಲಾಯಿತು.
ರೈತ ಸಂಘದ ನಿಯೋಗದಲ್ಲಿ  ಕ.ರಾ ರೈತ ಸಂಘದ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು,ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು,ಜಿಲ್ಲಾ ಸಂಚಾಲಕರಾದ ದಯಾನಂದ ಶೆಟ್ಟಿ ,ಸದಸ್ಯ ಯೂಸುಫ್ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *