ಬಂಟ್ವಾಳ: ಆರ್. ಎಸ್. ಎಸ್. ಮುಖಂಡ , ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ  ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾದ ಸಂದೇಶ ಹರಿಯಬಿಟ್ಟ  ವ್ಯಕ್ತಿಯ ವಿರುದ್ಧ ಕಾನೂನು  ಕ್ರಮಕೈಗೊಳ್ಳುವಂತೆ ವಿಶ್ವಹಿಂದೂ ಪರಿಷತ್, ಭಜರಂಗದಳದ ಕಲ್ಲಡ್ಕ ವಲಯ ಅಧ್ಯಕ್ಷ ಪುಷ್ಪರಾಜ್ ಅವರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಗುರುವಾರ ದೂರು ನೀಡಿದ್ದಾರೆ.
FB_IMG_1582197786447ಮಂಗಳೂರು ತಾಲೂಕಿನ ಉಲಾಯಿಬೆಟ್ಟು ಮಂಜಗುಡ್ಡೆ ನಿವಾಸಿ ಸಬೀನ್ ಯಾನೆ ಅಬ್ದುಲ್ ಸಲೀಂ ಅಡ್ಮಿನ್ ಅಗಿರುವ ಕರೆಂಟ್ ಅಫೇರ್ ಎಂಬ ಸುಮಾರು 250 ಸದಸ್ಯ ರಿರುವ ವಾಟ್ಸ್ ಪ್ ಗ್ರೂಪ್ ನಲ್ಲಿ ಕಲ್ಲಡ್ಕ ಡಾ.ಪ್ರಭಾಕರ ಭಟ್ ಅವರ ಭಾವಚಿತ್ರವನ್ನು ವಿಕೃತವಾಗಿ ಎಡಿಟ್  ಮಾಡಿದ್ದಲ್ಲದೆ, ಪ್ರಧಾನಿ ನರೇಂದ್ರ ಮೋದಿ, ಗೃಹಮಂತ್ರಿ ಅಮಿತ್ ಶಾ, ಹಿಂದೂ ಧರ್ಮದ ಮತ್ತು ಹಿಂದೂ ನಾಯಕರನ್ನು ಅವ್ಯಾಚ್ಯವಾಗಿ   ನಿಂದಿಸಿ ಹರಿಯಬಿಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.
FB_IMG_1582197736471 ಆದೇರೀತಿ ಆರ್.ಎಸ್. ಎಸ್.ಬಗ್ಗೆ ಯೂ ಅವಹೇಳನ ಕಾರಿಯಾದ ಅಶ್ಲೀಲ ಪದಗಳನ್ನು  ಬರೆದಿದ್ದು,ವಿದೇಶದಲ್ಲಿ ಕೆಲಸ ಮಾಡುತ್ತಿರುವ ಹಿಂದೂ ಯುವಕರಿಗೂ  ಬೇರೆ ಯವರ ಮೂಲಕ ಬೆದರಿಕೆ ಕರೆ ಮಾಡಿಸುತ್ತಿದ್ದಾನೆ ಎಂದು ದೂರಿನಲ್ಲಿ ಅಪಾದಿಸಲಾಗಿದೆ.ಈತ ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿರುವವರ ಜೊತೆ ಸಂಪರ್ಕ ಇರುವ ಬಗ್ಗೆಯು  ಗುಮಾನಿ ಇದ್ದು, ಇಂತಹ ವ್ಯಕ್ತಿಗಳಿಂದ ಸಮಾಜದ ಸ್ವಾಸ್ಥ್ಯ ಕದಡುವುದಲ್ಲದೆ , ಸಾಮರಸ್ಯಕ್ಕು ಧಕ್ಕೆಯಾಗುತ್ತದೆ. ಈ ನಿಟ್ಟಿನಲ್ಲಿಈತನ ವಿರುದ್ದ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಪುಷ್ಪರಾಜ್ ಪೊಲೀಸ್ ಠಾಣೆಗೆ ನೀಡಿರುವ  ದೂರಿನಲ್ಲಿ ಆಗ್ರಹಿಸಿದ್ದಾರೆ.
FB_IMG_1582197703642

By Suddi9

Leave a Reply

Your email address will not be published. Required fields are marked *