ಬಂಟ್ವಾಳ: ಸಜಿಪ ಚಟ್ಟೆಕಲ್ ಜಲಾಲಿಯಾ ಜುಮ್ಮಾ ಮಸೀದಿಯ ವಠಾರದಲ್ಲಿ ಮಾ.5,6,7 ಮೂರು ದಿನಗಳಲ್ಲಿ ನಡೆಯಲಿರುವ 8 ನೇ ವರ್ಷದ ಜಲಾಲಿಯಾ ವಾರ್ಷಿಕ ಹಾಗೂ ಬುರ್ದಾ ಮಜ್ಲೀಸ್ ಧಾರ್ಮಿಕ ಕಾರ್ಯಕ್ರಮದ ಪೂರ್ವಭಾವಿ ಸಭೆ ಸೆಯ್ಯದ್ ಮುಸ್ತಾಖು್ ರಹ್ಮಾನ್ ತಂಞಲ್ ರ ನೇತೃತ್ವದಲ್ಲಿ ನಡೆಯಿತು.
ಚಟ್ಟೆಕಲ್ ಜುಮ್ಮಾ ಮಸೀದಿಯ ಬೃಹತ್ ಜಲಾಲಿಯಾ ವಾರ್ಷಿಕ ಹಾಗೂ ಬುರ್ದಾ ಮಜ್ಲಿಸ್ 3 ದಿನಗಳ ಕಾಲ ನಡೆಯಲಿದ್ದು, ಮಾ.5 ರಂದು ಕುತಿಬಿಯ್ಯತ್ ಜಿಸ್ತಿಯಾ ನೇತೃತ್ವದ ಮುಹಮ್ಮದ್ ಮದನಿ ಕೋಯಿಕ್ಕೊಡ್, ಮಾ.6 ರಂದು ಬುರ್ದಾ ಮಜ್ಲಿಸ್ ದುಆ ಸಯ್ಯಿದ್ ಜಮಲುಲೈಲಿ ತಂಙಳ್ ಕಡಲುಂಡಿ ನೇತೃತ್ವದ ಉಸ್ತಾದ್ ಅಮೀರ್ ಅಲಿ ಜಫಾನಿ ಮಲಪ್ಪುರಂ ಹಾಗೂ ಮಾ.7 ರಂದು ಜಲಾಲಿಯ್ಯ ರಾತೀಬ್ ನೇತೃತ್ವದ ಸಯ್ಯಿದ್ ಶಹೀರ್ ತಂಙಳ್ ಮಳ್ಹರ್ ಸಯ್ಯಿದ್ ಮುಸ್ತಾಖು ರಹಮಾನ್ ತಂಙಳ್ ಚಟ್ಟೆಕಲ್ ಹಾಗೂ ಪ್ರಭಾಷಣ ಡಾ. ಫಾರೂಕ್ ನಹೀಮಿ ಕೊಲ್ಲಂ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.ಜಲಾಲಿಯಾ ರಾತೀಬ್ ವಾರ್ಷಿಕ ಬುರ್ದಾ ಮಜ್ಲೀಸ್ ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಅಬ್ದುಲ್ ರಜಾಕ್ ಕುಕ್ಕಾಜೆ ಅವರ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿಗಳನ್ನು ರಚಿಲಾಗಿದೆ.

