ಬಂಟ್ವಾಳ: ಗ್ರಾಮದ ದೇವಸ್ಥಾನವನ್ನು ಸಮೃದ್ಧಿಗೊಳಿಸುವುದರಿಂದ ಗ್ರಾಮ ಸಮೃದ್ಧಿಯಾಗುವುದು. ಊರವರ ಒಗ್ಗಟ್ಟಿನಿಂದ ದೇವಸ್ಥಾನ ಸಮೃದ್ಧಿಗೊಳ್ಳಬೇಕು ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಮೋಹನ್ ಆಳ್ವ ಅವರು ಹೇಳಿದರು. ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪುನರ್ನಿರ್ಮಾಣಗೊಳ್ಳುತ್ತಿದ್ದು, ಬ್ರಹ್ಮಕಲಶೋತ್ಸವದ ಪ್ರಯುಕ್ತ ಶನಿವಾರ ನಡೆದ ವಿಶೇಷ ಕುಂಕುಮಾರ್ಚನೆ ಹಾಗೂ ಪೂರ್ವಭಾವಿ ಸಮಾಲೊಚನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

1502pkt4
ಪುರಾತನ ಸಂಸ್ಕøತಿ ಇತಿಹಾಸವನ್ನು ಹೊಂದಿದ ಸಾವಿರಾರು ವರ್ಷಗಳ ನಾಗರೀಕತೆಯ ನಮ್ಮ ದೇಶದಲ್ಲಿ ಧಾರ್ಮಿಕ ಚಿಂತನೆ ರಕ್ತಗತವಾಗಿದ್ದು ಯಂತ್ರ ತಂತ್ರಜ್ಞಾನಗಳ ಸಹಕಾರವಿಲ್ಲದೆ ಶಕ್ತಿ ಮಾರ್ಗದಿಂದ ಅದ್ಭುತ ದೇವಸ್ಥಾನಗಳ ನಿರ್ಮಾಣವಾಗಿತ್ತು. ಇಂದು ಧರ್ಮದ ಮೇಲೆ ಜಾಗತೀಕರಣದ ದಾಳಿಯಾಗುತ್ತಿದ್ದು ಧಾರ್ಮಿಕ ಪ್ರಜ್ಞೆ ನಾಶವಾಗುತ್ತಿದೆ. ಧರ್ಮವನ್ನು ರೂಪಿಸಲು ದೇವಸ್ಥಾನಗಳಲ್ಲಿ ಧಾರ್ಮಿಕ ಚಿಂತನೆಯ ವೈಭವೀಕರಣವಾಗಿ ಧರ್ಮ ಉಳಿಯಬೇಕು ಎಂದರು. ಮೂಡುಬಿದಿರೆ ಉದ್ಯಮಿ ಶ್ರೀಪತಿ ಭಟ್, ಕ್ಷೇತ್ರದ ತಂತ್ರಿ ಶ್ರೀಪಾದ ಪಾಂಗಣ್ಣಾಯ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ಶ್ರೀ ಸು„ೀಂದ್ರ ವಿಷ್ಣುತೀರ್ಥ ಪ್ರಭು ಶ್ರೀಪಾದ ಸ್ವಾಮೀಜಿ ಮಾವಿನಕಟ್ಟೆ, ಬಾಬು ಪೂಜಾರಿ ಕೌಡಾಡಿಗುತ್ತು, ಭೊಜರಾಜ ಶೆಟ್ಟಿ ಕೊರಗಟ್ಟೆ, ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಕುಂಡೋಳಿಗುತ್ತು, ಕಾರ್ಯಾಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್, ಪ್ರಮುಖರಾದ ಲೋಕೇಶ್ ಆಚಾರ್ಯ, ಜಿ.ಕೆ. ಭಟ್, ಅಮ್ಮು ರೈ ಹರ್ಕಾಡಿ, ಬೂಬ ಪೂಜಾರಿ ಕುದ್ಕಂದೋಡಿ, ಸುಂದರ ಶೆಟ್ಟಿ ಬಜೆ, ಶೀನ ಶೆಟ್ಟಿ, ಪ್ರಭಾಕರ ಶೆಟ್ಟಿ ಬೆಂಗಳೂರು, ಸುಬ್ಬಣ್ಣ ಶಾಸ್ತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ವ್ಯವಸ್ಥಾಪನ ಸಮಿತಿ,ಜೀರ್ಣೋದ್ಧಾರ ಸಮಿತಿ, ವಿವಿಧ ಗ್ರಾಮ ಸಮಿತಿ ಪದಾ„ಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಪ್ರ. ಕಾರ್ಯದರ್ಶಿಯೋಗೀಶ್ ಕಲಸಡ್ಕ ಸ್ವಾಗತಿಸಿದರು.ರಮೇಶ್ ಶೆಟ್ಟಿ ವಾಮದಪದವು ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *