ಬಂಟ್ವಾಳ : ಪವಿತ್ರ ಇಸ್ಲಾಮಿನಲ್ಲಿ ದಾನ-ಧರ್ಮಗಳಿಗೆ ವಿಶೇಷ ಸ್ಥಾನಮಾನಗಳನ್ನು ಕಲ್ಪಿಸಲಾಗಿದೆ. ಆದರೆ ಇಂದಿನ ಆಧುನಿಕ ಯುಗದಲ್ಲಿ ದಾನ-ಧರ್ಮಗಳು ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋ ವೈರಲ್ ಮಾಡಲು ಮಹತ್ವ ಪಡೆದುಕೊಳ್ಳುತ್ತಿರುವುದು ಅತ್ಯಂತ ದುಃಖದ ವಿಚಾರವಾಗಿದೆ ಎಂದು ಪುತ್ತೂರು-ಕಲ್ಲೆಗ ಜುಮಾ ಮಸೀದಿ ಖತೀಬ್ ಅಬೂಬಕ್ಕರ್ ಸಿದ್ದೀಕ್ ಜಲಾಲಿ  ಕಳವಳ ವ್ಯಕ್ತಪಡಿಸಿದರು.

Gudde Angady Uroos 1ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಹಝ್ರತ್ ಶೈಖ್ ಮೌಲವಿ (ನ.ಮ) ಅವರ ಹೆಸರಿನಲ್ಲಿ ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿರುವ 40ನೇ ವರ್ಷದ ಉದಯಾಸ್ತಮಾನ ಉರೂಸ್ ಕಾರ್ಯಕ್ರಮದ ಪ್ರಯುಕ್ತ ಶನಿವಾರ ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣಗೈದ ಅವರು ದಾನ-ಧರ್ಮಗಳು ಅಲ್ಲಾಹನು ವ್ಯಕ್ತಿಗೆ ನೀಡಿದ ಸಂಪತ್ತಿನ ಭಾಗವನ್ನು ಬಡವರಿಗೆ ನೀಡುವ ನ್ಯಾಯೋಚಿತ ಹಕ್ಕಾಗಿದ್ದು, ಅದನ್ನು ಧನಿಕ ತನ್ನ ಉದಾರತೆ ಎಂಬ ಅಹಂಕಾರದಿಂದ ತಾನು ಬಡ-ಬಗ್ಗರಿಗೆ ನೀಡಿದ್ದನ್ನು ಬಹಿರಂಗವಾಗಿ ಫೋಟೋ ಶೇರ್ ಮಾಡುವ ಮೂಲಕ ಬಡವರನ್ನು ಅವಮಾನಿಸಿದಂತೆ  ಎಂದರು.

Gudde Angady Uroos 5ಕೇರಳ-ಕಣ್ಣೂರಿನ ಸಯ್ಯಿದ್ ಮುಹಮ್ಮದ್ ಸಫ್ವಾನ್ ತಂಙಳ್ ಅಲ್-ಬುಖಾರಿ ದುವಾಶಿರ್ವಚನಗೈದರು. ಮಸೀದಿ ಅಧ್ಯಕ್ಷ ಎಸ್ ಮುಹಮ್ಮದ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ. ರಮಾನಾಥ ರೈ, ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಮೊದಲಾದವರು ಭಾಗವಹಿಸಿದ್ದರು. ಸ್ಥಳೀಯ ಖತೀಬ್ ಹಂಝ ಫೈಝಿ ತೊಕ್ಕೊಟ್ಟು ಸ್ವಾಗತಿಸಿ, ಮದ್ರಸ ಕನ್ಸ್ಟ್ರಕ್ಷನ್ ಕಮಿಟಿ ಚೆಯರ್‍ಮೆನ್ ಹಾಜಿ ಮುಹಮ್ಮದ್ ನೀಮಾ ಪ್ರಸ್ತಾವನೆಗೈದರು. ಮಸೀದಿ ಕಾರ್ಯದರ್ಶಿ ಅಬೂಬಕ್ಕರ್ ಮೆಲ್ಕಾರ್ ವಂದಿಸಿದರು. ಶಹೀದ್ ಗುಡ್ಡೆಅಂಗಡಿ ಕಾರ್ಯಕ್ರಮ ನಿರೂಪಿಸಿದರು.

 Gudde Angady Uroos 4

 

By Suddi9

Leave a Reply

Your email address will not be published. Required fields are marked *