ಬಂಟ್ವಾಳ; ದೇವರನ್ನು ಕಾಣಬೇಕಾದರೆ ನಂಬಿಕೆ, ಶ್ರಧ್ಧೆ, ಪ್ರಯತ್ನ ಮತ್ತು ತಾಳ್ಮೆ ಇದ್ದಾಗ ಮಾತ್ರ ವಿಶ್ವವ್ಯಾಪಿಯಾಗಿ ಇರುವ ದೇವರನ್ನು ಕಾಣಬಹುದು ಎಂದು ಹಿಂದು ಜಾಗರಣ ವೇದಿಕೆ, ಪ್ರಾಂತ ಕಾರ್ಯದರ್ಶಿ ಕರ್ನಾಟಕ ದಕ್ಷಿಣ ರಾಧಾಕೃಷ್ಣ ಅಡ್ಯಾಂತಯ ಹೇಳಿದರು. ಇಲ್ಲಿಯ ತುಳಿಸೀವನ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ೧೭ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ದೇವರು ಎಲ್ಲಾ ಕಡೆಯಲ್ಲಿಯೂ ಇದ್ದಾನೆ. ಭಜನೆಯ ಮುಖಾಂತರವಾಗಿ ದೇವರನ್ನು ಸ್ಮರಿಸಬೇಕು ಎಂದರು.
ಅತಿಥಿಯಾಗಿದ್ದ ಶ್ರೀ ಲಕ್ಷ್ಮೀ ಪಂಪ್ಸ್ ಮತ್ತು ಹಾರ್ಡ್ವೇರ್ ನ ಮಾಲಕ ಶಂಕರ ಆಚಾರ್ಯ ಮಾತನಾಡಿ ಭಜನೆಯ ಮುಖಾಂತರ ಏನನ್ನು ಬೇಕಾದರೂ ಸಾಧಿಸಬಹುದು, ಭಜನೆ ಎಂದರೆ ಭಕ್ತಿ ಪ್ರತಿಯೊಬ್ಬರು ದೇವರನ್ನು ಭಜನಾ ಮೂಲಕ ಸ್ಮರಿಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನುಹೊಸಮನೆ ಬೋಳಂತೂರು ಮಹಾಬಲ ರೈ ವಹಿಸಿದ್ದರು. ಸಿವಿಲ್ ಇಂಜಿನಿಯರ್ ರಾಮ್ ಪ್ರಸಾದ್ ಕೊಂಬಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶ್ರೀ ಸಿದ್ದಿವಿನಾಯಕ ಭಜನಾ ಮಂಡಳಿಯ ಸದಸ್ಯ ಮುತ್ತಪ್ಪ ಮೂಲ್ಯ ಪ್ರಸ್ತಾವಿಸಿ, ಸ್ವಾಗತಿಸಿದರು. ಶ್ರೀ ಸಿದ್ದೀವಿನಾಯಕ ಭಜನಾ ಮಂಡಳಿಯ ಸದಸ್ಯ ಉಮೇಶ್ ಕೊಕ್ಕಪುಣಿ ವಂದಿಸಿದರು. ರಾಜೇಶ್ ಕೊಟ್ಟಾರಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.

