ಹಳೆಯಂಗಡಿ:ಮುಹೀಯ್ಯದ್ದಿನ್ ಜುಮಾ ಮಸೀದಿ (ರಿ) ಲಿಯಾವುಲ್ ಇಸ್ಲಾಂ ಧಪ್ಪ್ ಕಮೀಟಿ ಬೋಳ್ಳೂರು ಹಳೆಯಂಗಡಿ ವತಿಯಿಂದ 37 ನೇ ವಾರ್ಷಿಕ ದಫ್ ರಾತಿಬ್ ನೇರ್ಚೆ ಹಾಗೂ ಧಾರ್ಮಿಕ ಮತ ಪ್ರವಚನ ಫೆ. 4ರಿಂದ ನಡೆಯುತ್ತಿದ್ದು (ಫೆ.7 ಶುಕ್ರವಾರ) ಇಂದು ಬೃಹತ್ ದಫ್ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ. ಫೆ. 8 ಶನಿವಾರ ಮಧ್ಯಾಹ್ನ 2.00 ಗಂಟೆಗೆ ರಿಫಾಯೀ ದಫ್ ರಾತೀಬ್ ನಡೆಯಲಿದೆ. ರಾತ್ರಿ 8.00 ಗಂಟೆಗೆ ಸಮಾರೋಪ ಸಮಾರಂಭ ಕಾರ್ಯಕ್ರಮ ಮರ್ಹೂಮ್ ಕೆ. ಮೈದಿನ್ ಕುಟ್ಟಿ ಮುಸ್ಲಿಯಾರ್ ವೇದಿಕೆ ಬೊಳ್ಳೂರಿನಲ್ಲಿ ನಡೆಯಲಿದೆ.ಕಾರ್ಯಕ್ರಮದ ಅದ್ಯಕ್ಷತೆಯನ್ನು ಅಲ್ ಹಾಜ್ ಮುಹಮ್ಮದ್ ಅಝ್ಹರ್ ಫೈಝಿ ವಹಿಸಲಿದ್ದು,ಅಬ್ದುಲ್ ನಾಸಿರ್ ಮುಸ್ಲಿಯಾರ್ ಸ್ವಾಗತ ಭಾಷಣ ಮಾಡಲಿದ್ದು ,ದ.ಕ ಜಿಲ್ಲಾ ಖಾಝಿ ಅಲ್ ಹಾಜ್ ತ್ವಾಖ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಎಸ್.ಕೆ.ಎಸ್.ಎಸ್.ಎಫ್ ಕರ್ನಾಟಕ ರಾಜ್ಯಾದ್ಯಕ್ಷ ಅನೀಸ್ ಕೌಸರಿ ಮುಖ್ಯ ಪ್ರಭಾಷಣ ನಡೆಸಲಿದ್ದು, ಬಹುಮಾನ್ಯರಾದ ಅಸ್ಸಯ್ಯಿದ್ ನಜ್.ಮುದ್ದೀನ್ ಪೂಕೋಯ ತಂಙಳ್ ಅಲ್ ಯಮಾನಿ ಅಲ್ ಖಾದಿರಿ ವಯಾನಾಡ್ ಕೇರಳ ದುವಾ ಆಶಿರ್ವಚನ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಉಲಮಾ ಉಮರ ನೇತಾರರು ರಾಜಕೀಯ ಸಾಮಾಜಿಕ ನಾಯಕರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
