ಮಂಗಳೂರು:ಭಾರತೀಯ ಕೃಷಿ ಅನುಸಂಧಾನ ಪರಿಷತ್ ಅಂಗ ಸಂಸ್ಥೆಯಾದ ಕೃಷಿ ವಿಜ್ಞಾನ ಕೇಂದ್ರ, ದಕ್ಷಿಣ ಕನ್ನಡ ಮಂಗಳೂರು ಹಾಗೂ ಕರ್ನಾಟಕ ಕೃಷಿ ಬೆಲೆ ಆಯೋಗ ಪ್ರಾಯೋಜಿತ ‘ರೈತರ ಆದಾಯ ಹಾಗೂ ಕಲ್ಯಾಣ ವೃದ್ಧಿ’ ಯೋಜನೆ ಅಡಿಯಲ್ಲಿ “ಸುಧಾರಿತ ಬಾಳೆ ಕೃಷಿ ಕಾರ್ಯಾಗಾರ”ವನ್ನು ದಿನಾಂಕ 04.02.2020 ರಂದು ದರೆಗುಡ್ಡೆಯಲ್ಲಿ ಹಮ್ಮಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ಮಂಗಳೂರು ಕೆವಿಕೆಯ ವಿಜ್ಞಾನಿ ಮತ್ತು ಕಾರ್ಯಕ್ರಮ ಸಂಯೋಜಕರಾದ ಡಾ. ಕೇದಾರನಾಥ್ (ಸಸ್ಯ ಸಂರಕ್ಷಣೆ) ರವರು ರೈತರನ್ನು ಸ್ವಾಗತಿಸಿದರು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕಿಯಾಗಿ ಭಾಗವಹಿಸಿದ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ. ರಶ್ಮಿ ಆರ್. ರವರು ಹಣ್ಣಿನ ಬೆಳೆಯಲ್ಲಿ ಮಾವಿನ ನಂತರ ಬಾಳೆ ಬಹು ಪ್ರಮುಖವಾದ ಬೆಳೆ. ಇದನ್ನು ಬೆಳೆಯುವುದರಿಂದ ರೈತರು ತಮ್ಮ ಆದಾಯವನ್ನು ದ್ವಿಗುಣಗೊಳಿಸಬಹುದು ಅಲ್ಲದೆ ಈ ಹಣ್ಣಿನಲ್ಲಿ ಕೆಲ ಖನಿಜಾಂಶಗಳು, ಶರ್ಕರಪಿಷ್ಟ ಹಾಗೂ ಜೀವಸತ್ವಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದ್ದು, ಶಕ್ತಿಯ ಆಗರವಾಗಿದೆ ಎಂದು ತಿಳಿಸಿದರು. ಡಾ. ಕೇದಾರನಾಥ್ (ಸಸ್ಯ ಸಂರಕ್ಷಣೆ) ರವರು ಬಾಳೆ ಬೆಳೆಯಲ್ಲಿ ಕೀಟ ಮತ್ತು ರೋಗಗಳ ಹತೋಟಿ ಕ್ರಮಗಳು, ಸಮಗ್ರ ನಿರ್ವಹಣೆ ಮತ್ತು ಅತಿಯಾದ ಕೀಟ ಮತ್ತು ರೋಗನಾಶಕಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಹಿರಿಯ ಸಂಶೋಧಕರು ಸಂಘಮಿತ್ರೆ ವಿ. ಕೆ. (ಕೃಷಿ ಬೆಲೆ ಆಯೋಗ), ರೈತರ ಆದಾಯ ಹಾಗೂ ಕಲ್ಯಾಣ ವೃದ್ಧಿ’ ಯೋಜನೆಯ ದರೆಗಡ್ಡೆ ರೈತ ಮುಖಂಡರುಗಳಾದ ರಾಜವರ್ಮ ಬೈಲಂಗಡಿ, ಮತು ಸುಭಾಶ್ಚಂದ್ರ ಚೌಟ, ಹಾಗೂ ಇತರೆ ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದ ಅಂಗವಾಗಿ ರೈತರಿಗೆ ಬಾಳೆ ಸಸಿಗಳನ್ನು ವಿತರಿಸಲಾಯಿತು.
