ಮೂಡುಬಿದಿರೆ: ರಾಜ್ಯ ಸಕರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವ ಗ್ರಾಮಗಳಿಗೆ ನೀಡುವ `ಗಾಂಧಿ ಗ್ರಾಮ ಪುರಸ್ಕಾರ’ವನ್ನು ತೆಂಕಮಿಜಾರು ಗ್ರಾ.ಪಂನ ಪರವಾಗಿ ಪಂಚಾಯತ್ ಅಧ್ಯಕ್ಷೆ ಉಮಾವತಿ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯೀಶ ಚೌಟ ಮತ್ತು ಅವರು ಬೆಂಗಳೂರಿನ ಬ್ಯಾಂಕ್ವೆಟ್ ಹಾಲ್ ನಲ್ಲಿ ಗುರುವಾರ ಸಂಜೆ ಸ್ವೀಕರಿಸಿದರು.

ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಪ್ರಶಸ್ತಿ ಪತ್ರ, ಐದು ಲಕ್ಷ ರೂ.ಗಳ ಚೆಕ್ನ್ನು ವಿತರಿಸಿ ಗೌರವಿಸಿದರು. ಸಿಬ್ಬಂದಿ ರಾಕೇಶ್ ಕುಮಾರ್ ಉಪಸ್ಥಿತರಿದ್ದರು.
ತೆಂಕಮಿಜಾರು ಗ್ರಾ.ಪಂ ,ಮಂಗಳೂರು ತಾಲೂಕಿನಿಂದ 2013-14ನೇ ಸಾಲಿನ ಗಾಂಧಿ ಗ್ರಾಮ ಪ್ರಶಸ್ತಿಗೆ ಆಯ್ಕೆಯಾದ ಏಕೈಕ ಪಂಚಾಯತ್ ಆಗಿದೆ.
