ಬಂಟ್ವಾಳ:ಪಕ್ಷಿಗಳ ಗೂಡನ್ನುಕಂಡು ನಾವುಗಳು ಕುತೂಹಲದಿಂದಅದನ್ನು ಮುಟ್ಟಿ, ಕಲ್ಲು ಬಿಸಾಡಿ,ಗೂಡಿನಲ್ಲಿರುವ ಮೊಟ್ಟೆಯನ್ನುಕುಟ್ಟಿ ಪುಡಿ-ಪುಡಿ ಮಾಡುವಅಥವಾ ಮರಿಗಳನ್ನು ಸಾಯಿಸುವ ವಿಕೃತ ಮನಸ್ಸಿನಿಂದ ಪಕ್ಷಿ ಪ್ರಪಂಚಕ್ಕೆಕಂಟಕವಾಗಿದೆ.ನಾವು ಬದುಕುವ, ಈ ಭೂಮಿಯ ಮೇಲೆ ಬದುಕುವಇತರ ಜೀವಿಗಳನ್ನು ಬದುಕಲು ಬಿಡುವ. “ಪಕ್ಷಿಗಳ ಬಂಧನತರವಲ್ಲ”ಎಂದುಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ಸಂಚಾಲಕಿ ರಮ್ಯ ನಿತ್ಯಾನಂದ ಶೆಟ್ಟಿ ಹೇಳಿದರು.

IMG-20200128-WA0040
ಇವರು ಸರಕಾರಿ ಪ್ರೌಢಶಾಲೆ ಸಿದ್ಧಕಟ್ಟೆ, ಇಲ್ಲಿ ನಡೆದಗುಬ್ಬಚ್ಚಿ ಗೂಡು….. ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲಗಳ ಉಳಿವಿಗೆ ಸಸ್ಯರಾಶಿಗಳ ಮಹತ್ವ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಗುಬ್ಬಚ್ಚಿ ಗೂಡು ಜಾಗೃತಿ ಅಭಿಯಾನದರೂವಾರಿ ನಿತ್ಯಾನಂದ ಶೆಟ್ಟಿ, ವಿದ್ಯಾರ್ಥಿಗಳಿಗೆ ಪಕ್ಷಿ ಮತ್ತು ಪತಂಗಗಳ ಛಾಯಾಗ್ರಹಣ ತೋರಿಸಿ, ಸಂವಾದ ನಡೆಸಿ,ಕಾಗೆಗಳಿದ್ದರೆ ಮಾತ್ರ ಕೋಗಿಲೆಗಳ ಉಳಿವು ಸಾಧ್ಯ, ಬಣ್ಣಕ್ಕೆ ಮರುಳಾಗಿ ಕಾಗೆಗಳ ಪಾಲಿಗೆ ಕಂಟಕರಾಗದಿರಿ. ಕಾಗೆಗಳು ಕೂಡ ನಮಗೆ ಅವಶ್ಯ. ಪಕ್ಷಿ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಬೇಸಿಗೆ ಕಾಲದಲ್ಲಿ ನೀರು,ಆಹಾರವನ್ನುಇಟ್ಟು ಮಳೆಗಾಲದಲ್ಲಿ ಗಿಡಗಳನ್ನು ನೆಟ್ಟು ಪಕ್ಷಿ ಲೋಕದ ಉಳಿವಿಗೆ ಪಣತೊಡೋಣಅಂದರು.
ಈ ಸಂದರ್ಭದಲ್ಲಿ ಮಣ್ಣಿನ ಪಾತ್ರೆಯನ್ನುಉಚಿತವಾಗಿನೀಡಿ,ಪಕ್ಷಿಗಳಿಗೆ ನೀರು ಮತ್ತುಆಹಾರಇಡುವ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಲಾಯಿತು.
ಉಪ ಪ್ರಾಂಶುಪಾಲರಾದರಮಾನಂದ ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *