ಮಂಗಳೂರು ತಾಲೂಕಿನ ವಾಮಂಜೂರಿನ ಕೆತ್ತಿಕಲ್ಲಿನಿಂದ ತಾರಿಗುಡ್ಡೆ ಪೆರ್ಮಂಕಿಯವರೆಗೆ 1 ಕೋಟಿ 50 ಲಕ್ಷ ರೂಪಾಯಿ ಅನುದಾನದಲ್ಲಿ ರಸ್ತೆ ಅಭಿವೃದ್ಧಿಗೆ ಸೋಮವಾರ ಮಂಗಳೂರು ನಗರ ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿಯವರು ಗುದ್ದಲಿ ಪೂಜೆ ನೆರವೇರಿಸಿದರು.

IMG-20200203-WA0046ತಮ್ಮ ಬಹುವರ್ಷಗಳ ಬೇಡಿಕೆಯನ್ನು ಶೀಘ್ರದಲ್ಲಿ ಈಡೇರಿಸಿ ಅಭಿವೃದ್ಧಿಗೆ ಕಾರಣೀಕೃತರಾಗಿರುವ ಶಾಸಕ ಡಾ. ಭರತ್ ಶೆಟ್ಟಿಯವರನ್ನು ಸ್ಥಳೀಯ ಮುಖಂಡರು, ಕಾರ್ಯಕರ್ತರು, ನಾಗರಿಕರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಮನಪಾ ಸದಸ್ಯೆ ಹೇಮಲತಾ ರಘು ಸಾಲಿಯಾನ್, ಪ್ರಮುಖರಾದ ರಾಜೇಶ್ ಕೊಟ್ಟಾರಿ, ಅನಿಲ್ ರೈ, ಗೋಕುಲದಾಸ ಶೆಟ್ಟಿ, ಸಚಿನ್ ಹೆಗ್ಡೆ, ಕಿಶೋರ್ ಕುಮಾರ್, ಹರೀಶ್ ಹೊಸಮನೆ, ಸುರೇಖ ಪೂಜಾರಿ, ಶಶಿಕುಮಾರ್, ನಾಗೇಶ್ ಕಾಪೆಟ್ಟು ಮತ್ತಿತ್ತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *