ಬಂಟ್ವಾಳ : ಬಿ.ಸಿ.ರೋಡಿನ  ರೈಲ್ವೇ ಹಳಿಯಲ್ಲಿ ಸುಮಾರು ೪೫-೫೦ ವರ್ಷದ ಅಪರಿಚಿತ ಮಹಿಳೆಯೊಬ್ಬರ ಶವ ಶುಕ್ರವಾರ  ಪತ್ತೆಯಾಗಿದೆ.ಬೆಳಗ್ಗೆ ೯ರ ಸುಮಾರಿಗೆ ಕರ್ತವ್ಯದಲ್ಲಿದ್ದ ಗ್ಯಾಂಗ್‌ಮ್ಯಾನ್ ಬಾಬು ಅವರು ಶವವನ್ನು ಕಂಡಿದ್ದು, ತತ್‌ಕ್ಷಣ ರೈಲ್ವೇ ಇಲಾಖೆಗೆ ಮಾಹಿತಿ ನೀಡಿದ್ದಾರೆ.ಮಹಿಳೆಯು ನೀಲಿ ಬಣ್ಣದ ಚೂಡಿದಾರ್ ಧರಿಸಿದ್ದು, ಸಾಧಾರಣ ಮೈಕಟ್ಟು, ಎಣ್ಣೆ ಗೆಂಪು ಮೈಬಣ್ಣ, ದುಂಡು ಮುಖ, ದಪ್ಪ ಮೂಗು, ತಲೆಯಲ್ಲಿ ಕಪ್ಪು-ಬಿಳಿ ಮಿಶ್ರಿತ ಕೂದಲು, ಎಡಗೈನ ಮುಂಗೈನಲ್ಲಿ ಹೊಲಿಗೆ ಹಾಕಿದ ಗಾಯದ ಗುರುತು ಪತ್ತೆಯಾಗಿದೆ.ಪ್ರಕರಣ ದಾಖಲಿಸಿಕೊಂಡಿರುವ ರೈಲ್ವೇ ಪೊಲೀಸರು ವಾರೀಸುದಾರರು ಮಂಗಳೂರು ರೈಲ್ವೇ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ ೦೮೨೪-೨೨೨೦೫೫೯ಯನ್ನು ಸಂಪರ್ಕಿಸುವಂತೆ ಕೋರಿದ್ದಾರೆ.

By suddi9

Leave a Reply

Your email address will not be published. Required fields are marked *