ಕೈಕಂಬ:ಒಂದು ಕಾಲದಲ್ಲಿ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ದೇಶದ ಮೂಲೆ ಮೂಲೆಗೆ ಬ್ರಾಂಡ್‍ಬ್ಯಾಂಡ್, ಮೊಬೈಲ್ ಜಾಲವನ್ನು ವಿಸ್ತರಿಸಿ ಜನಸಾಮಾನ್ಯರಿಂದ ಹಿಡಿದು ಸಮಾಜದ ಎಲ್ಲಾ ವರ್ಗದವರ ಹಾಗೂ ಮಾಧ್ಯಮಗಳಿಗೆ ಶಿಕ್ಷಣಾ ಸಂಸ್ಥೆಗಳಿಗೆ ತನ್ನ ಸೇವೆಯನ್ನು ನೀಡಿ ಉತ್ತಮವಾದ ಸೇವೆಯಿಂದ ಜನಸ್ನೇಹಿ ಇಲಾಖೆಯಾಗಿತ್ತು.ಆದರೆ ಇಂದು ಸಂಪರ್ಕ ವ್ಯವಸ್ಥೆಯಲ್ಲಿ ಖಾಸಗಿಯವರ ಪ್ರವೇಶ, ಖಾಸಗಿಯವರ ಉಚಿತ ಸೇವೆ,ತ್ವರಿತ ಸೇವೆ,ತೀರಾ ಅಗ್ಗದ ಸೇವೆ ಹಾಗೂ ಅಮೀಷಗಳಿಂದ ಬಿ.ಎಸ್.ಎನ್.ಎಲ್. ಪೈಪೋಟಿ ನಡೆಸಲಾಗದೆ ತನ್ನ ಭಾರೀ ಸಂಖ್ಯೆಯ ಸಿಬ್ಬಂಧಿವರ್ಗದವರಿಗೆ ಹಾಗೂ ಅರೆಕಾಲಿಕ ನೌಕರರಿಗೂ ವೇತನ ನೀಡಲಾಗದೆ ನಷ್ಟದ ದಾರಿಯಲ್ಲಿ ನಡೆದು ಪರದಾಡುವ ಪರಿಸ್ಥಿತಿ ಬಂದೊದಗಿರುವುದು ದುರಾದೃಷ್ಟವೇ ಸರಿ.

31vp swayam nivruthiಖರ್ಚು ವೆಚ್ಚಗಳನ್ನು ಸರಿದೂಗಿಸುವ ಸಲುವಾಗಿ ಹಾಗೂ ಬಿ.ಎಸ್.ಎನ್.ಎಲ್. ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಇಲಾಖೆಯು 50ವರ್ಷಕ್ಕಿಂತ ಮೇಲ್ಪಟ್ಟು ನೌಕರರಿಗೆ ಸ್ವಯಂ ನಿವೃತ್ತಿ ಘೋಷಿಸಿತು.ಇದರಂತೆ ಇಲಾಖೆಯಲ್ಲಿ ಸುಮಾರು 75000ಕ್ಕಿಂತಲೂ ಹೆಚ್ಚಿನ ವಿವಿಧ ಸ್ತರದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸ್ವಯಂ ನಿವೃತ್ತಿ ಆಯ್ಕೆ ಮಾಡಿ ಈ ತಿಂಗಳ ಅಂತ್ಯಕ್ಕೆ ಅಂದರೆ ಜನವರಿ 31, 2020ಕ್ಕೆ ಇಲಾಖೆಯಿಂದ ಹೊರನಡೆಯಲಿದ್ದಾರೆ.ಇದರಂತೆ ಮಂಗಳೂರು ಗ್ರಾಮಾಂತರ ವಿಭಾಗದ ಸಿಬ್ಬಂದಿ ವರ್ಗದವರ ವಾಮಂಜೂರು ದೂರವಾಣಿ ಕೇಂದ್ರದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಂಡಿದ್ದು ಇಲಾಖೆಯಲ್ಲಿ ತಾವು ಸಲ್ಲಿಸಿದ ದೀರ್ಘಕಾಲದ ಸೇವೆಯನ್ನು ನೆನಪಿಸಿಕೊಂಡರು.ಈ ಸಮಾರಂಭದಲ್ಲಿನೀರುಮಾರ್ಗ, ವಾಮಂಜೂರು, ಗುರುಪುರ, ಅಡ್ಡೂರು, ಪೊಳಲಿ, ಕೈಕಂಬ, ಗಂಜಿಮಠ,ಮುಚ್ಚೂರು, ಕುಪ್ಪೆಪದವು ದೂರವಾಣಿ ಕೇಂದ್ರಗಳ ತಾಂತ್ರಿಕ ಸಹಾಯಕರಾದ ರಾಮಪ್ರಸಾದ, ವೆಂಕಟೇಶ, ಉಮೇಶ, ಮೋಹನ,ಉದಯಶಂಕರ,ಗಣೇಶ ಹಾಗೂ ಕಛೇರಿ ಸಿಬ್ಬಂಧಿಗಳಾದ ಭಾರತಿ, ನಿತ್ಯಾನಂದ ಭಟ್, ಹಾಗೂ ಉಪಮಂಡಲ ಅಧಿಕಾರಿ ರಮೇಶ್ ರಾವ್ ಇವರುಗಳನ್ನು ಬೀಳ್ಕೊಡುವ ಕಾರ್ಯಕ್ರಮ ನಡೆಯಿತು. ಸ್ವಯಂ ನಿವೃತ್ತಿ ಹೊಂದುತ್ತಿರುವ ಅಧಿಕಾರಿ ಹಾಗೂ ಸಿಬ್ಬಂಧಿ ವರ್ಗದವರು ಇಲಾಖೆಗೆ ತಾವು ಚಿರಋಣಿಗಳಾಗಿದ್ದು ಮುಂದಿನ ದಿನಗಳಲ್ಲಿ ಇಲಾಖೆಯು ಇನ್ನಷ್ಟು ಉತ್ತಮ ಸೇವೆಯನ್ನು ನೀಡಿ ಭಾರತದ ನಂ.1 ಸಂಸ್ಥೆಯಾಗಿ ಹೊರಬರಲಿ ಎಂದು ಒಕ್ಕೊರಲಿನಿಂದ ಹಾರೈಸಿದರು.ಕಣ್ಣೂರು-ಪಡೀಲು ದೂರವಾಣಿ ಕೇಂದ್ರದ ಶಶಿಧರನ್ ಕಾರ್ಯಕ್ರಮವನ್ನು ನಡೆಸಿಕೊಟ್ಟರೆ, ನಿವೃತ್ತ ಸಿಬ್ಬಂಧಿ ಅಚ್ಚುತ ಮೂಡಬಿದ್ರಿ ಇವರು ಧನ್ಯವಾದವನ್ನು ಸಮರ್ಪಿಸಿದರು.

ಚಿತ್ರ31ವಿಪಿ ಸ್ವಯಂ ನಿವೃತ್ತಿ

clik now :  https://youtu.be/csD3MuGcZQI

 

 

By suddi9

Leave a Reply

Your email address will not be published. Required fields are marked *