ಕೈಕಂಬ;ವಾಮಂಜೂರು ತಿರುವೈಲುಗುತ್ತಿನ `ತಿರುವೈಲುಗುತ್ತು ಅಷ್ಟಪವಿತ್ರ ನಾಗಮಂಡಲೋತ್ಸವ ಸೇವೆ’ಯ ಆಮಂತ್ರಣ ಪತ್ರಿಕೆ ಜ. 27ರಂದು ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ ಗುತ್ತಿನ ಹಿರಿಯ ನವೀನ್ಚಂದ್ರ ಆಳ್ವರ ಮುಂದಾಳತ್ವದಲ್ಲಿ ನಡೆಯಿತು.
ದೇವಸ್ಥಾನದಲ್ಲಿ ನಡೆದ ಸರಳ ಸಮಾರಂಭದಲ್ಲಿ ತಿರುವೈಲುಗುತ್ತು ರಾಜಕುಮಾರ ಶೆಟ್ಟಿ, ರವೀಂದ್ರ ನಾಯಕ್ ಕುಡುಪು, ಉದಯ ಕುಮಾರ್ ಕುಡುಪು, ಹರೀಶ್ ಮೂಡುಶೆಡ್ಡೆ, ಬಾಲಕೃಷ್ಣ ಭಂಡಾರಿ, ಪ್ರಭಾಕರ ಶೇಖ, ಸತೀಶ್ ಶೆಟ್ಟಿ ಮೂಡುಜಪ್ಪುಗುತ್ತು, ನಾಗರಾಜ ರೈ ತಿಮಿರಿಗುತ್ತು, ಮಹಾಬಲ ಶೆಟ್ಟಿ ಪಣಿಮಜಲು, ರಾಜು ಅಂಚನ್ ಅಪ್ಪನಬೆಟ್ಟು ಮತ್ತಿತರರು ಉಪಸ್ಥಿತರಿದ್ದರು. ದೇವಸ್ಥಾನದ ಅರ್ಚಕರಾದ ಬಾಲಕೃಷ್ಣ ಭಟ್ ಮತ್ತು ಸದಾಶಿವ ಉಪಾಧ್ಯಾಯರು ಆಮಂತ್ರಣ ಪತ್ರಿಕೆಗೆ ಪೂಜೆ ನೆರವೇರಿಸಿ, ಪ್ರಸಾದ ವಿತರಿಸಿದರು.
ಪೂಜಾ ಕಾರ್ಯಕ್ರಮ :
ಫೆಬ್ರವರಿ 23ರಿಂದ ಧಾರ್ಮಿಕ ಕಾರ್ಯಕ್ರಮ ಆರಂಭಗೊಳ್ಳಲಿದೆ. ಫೆ. 23ರಂದು ಬೆಳಿಗ್ಗೆ 7ಕ್ಕೆ ದೇವನಾಂದಿ, ಗಣಹೋಮ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಫೆ. 24ರಂದು ಸಂಜೆ 5ಕ್ಕೆ ವಾಸ್ತುಪೂಜೆ, ವಾಸ್ತುಹೋಮ, ರಕ್ಷೋಘ್ನ ಹೋಮ, ಫೆ. 24ರಂದು ಬೆಳಿಗ್ಗೆ ಚಂಡಿಕಾ ಹೋಮ, ಸಂಜೆ 5ಕ್ಕೆ ದುರ್ಗಾ ನಮಸ್ಕಾರ ಪೂಜೆ, ಚಂಡಿಕಾ ಹೋಮ, ವರಾಹ ಹೋಮ, ನಾಗಮಂಡಲ ಸ್ಥಳದಲ್ಲಿ ವಾಸ್ತು ರಕ್ಷೋಘ್ನ ಹಾಗೂ ಫೆ. 26ರಂದು ರಾತ್ರಿ 10ಕ್ಕೆ ಹಾಲಿಟ್ಟು ಸೇವೆ, ಬಳಿಕ `ಅಷ್ಟಪವಿತ್ರ ನಾಗಮಂಡಲೋತ್ಸವ’ ಜರುಗಲಿದೆ.
27ವಿಪಿ ಆಮಂತ್ರಣ ಪತ್ರಿಕೆ ಬಿಡುಗಡೆ

