ಕೈಕಂಬ: ಮನೆಯ ಎದುರುಗಡೆ ನಿಲ್ಲಿಸಿದ್ದ ಸ್ಕಾರ್ಪಿಯೋ ವಾಹನ ಶಾರ್ಟ್ ಸಕ್ರ್ಯೂಟ್ ನಿಂದ ಬೆಂಕಿ ತಗುಲಿ ಉರಿದು ಭಸ್ಮವಾದ ಘಟನೆ ಶನಿವಾರ ಕುಪ್ಪೆಪದವಿನಲ್ಲಿ ನಡೆದಿದೆ. ಕುಪ್ಪೆಪದವಿನ ಐ ಕೃಷ್ಣ ಭಟ್ ಎಂಬವರು ತಮ್ಮ ಸ್ಕಾರ್ಪಿಯೋವನ್ನು ಮನೆಯ ಗೇಟಿನ ಮುಂಭಾಗದಲ್ಲಿ ನಿಲ್ಲಿಸಿ ಬೇರೆ ವಾಹನದಲ್ಲಿ ಹೊರಹೋಗಿದ್ದರು.

b64f168d-a17b-4e33-ad59-780f3e9fb780 ಮಧ್ಯಾಹ್ನ 3 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ, ಸ್ಕಾರ್ಪಿಯೋ ದಿಂದ ಹೊಗೆ ಬರುತ್ತಿರುವುದನ್ನು ಕಂಡ ಮನೆಯವರು, ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ, ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ ಬೆಂಕಿ ಹತೋಟಿಗೆ ಬಾರದೆ ಇಡೀ ವಾಹನ ಕ್ಕೆ ವ್ಯಾಪಿಸಿತು, ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವಷ್ಟರಲ್ಲಿ ವಾಹನ ಸುಟ್ಟು ಭಸ್ಮ ವಾಗಿತ್ತು, ಅಂದಾಜು 4 ಲಕ್ಷ ರೂಪಾಯಿ ನಷ್ಟ ಉಂಟಾಗಿದ್ದು, ಬಜಪೆ ಠಾಣೆಯಲ್ಲಿ ದೂರು ದಾಖಲಾಗಿದೆ.

By suddi9

Leave a Reply

Your email address will not be published. Required fields are marked *