ಬಂಟ್ವಾಳ: ಪುರಸಭಾ ವ್ಯಾಪ್ತಿಯ ಬಿ.ಸಿ.ರೋಡು,ಕೈಕಂಬ ಹಾಗೂ ಮೆಲ್ಕಾರ್ ನಲ್ಲಿ ಸಾರ್ವಜನಿಕ ಶೌಚಾಲಯ ಮತ್ತು ಬಿ.ಸಿ.ರೋಡು ಪರಸರದಲ್ಲಿ ಸಂತೆಮಾರುಕಟ್ಟೆ ನಿರ್ಮಾಣಕ್ಕೆ ಮುಂದಿನ ಬಜೆಟ್ ನಲ್ಲಿ ಪ್ರಮುಖವಾಗಿ ಅನುದಾನ ಮೀಸಲಿರಿಸಲು ಬಂಟ್ವಾಳ ಪುರಸಭೆಯಲ್ಲಿ ಗುರುವಾರ ನಡೆದ ಬಜೆಟ್ ಪೂರ್ವ. ತಯಾರಿಯ ಸಮಾಲೋಚನಾ ಸಭೆಯಲ್ಲಿ ನಿರ್ಧರಿಸಲಾಯಿತು. ಮುಖ್ಯಾಧಿಕಾರಿ ಲೀನಾ ಬ್ರಿಟ್ಡೋ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ವಿವಿಧ ಸಂಘಸಂಸ್ಥೆಯ ಪ್ರಮುಖರು,ಗಣ್ಯರು ಹಾಗೂ ಪತ್ರಕರ್ತರು ನೀಡಿದ ಸಲಹೆಯನ್ನು ಪರಿಗಣಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ವಿವಿಧ ಕೆಲಸಕಾರ್ಯಗಳಿಗಾಗಿ ಬರುವ ಜನಸಾಮಾನ್ಯರಿಗೆ ಬಿ.ಸಿ.ರೋಡಿನಲ್ಲಿ ಸಾರ್ವಜನಿಕ ಶೌಚಾಲಯದ ವ್ಯವಸ್ಥೆಯಲ್ಲದಿದ್ದು,ಸಾರ್ವಜನಿಕ ಸ್ಥಳವನ್ನೇ ಮೂತ್ರಶಂಕೆಗೆ ಬಳಸುತ್ತಿದ್ದಾರೆ.
ಆದೇರೀತಿ ಬೆಳೆಯುತ್ತಿರುವ ಪ್ರದೇಶವಾದ ಕೈಕಂಬ ,ಮೆಲ್ಕಾರ್ ನಲ್ಲೂ ಶೌಚಾಲಯದ ವ್ಯವಸ್ಥೆಯಿಲ್ಲದಿದ್ದು,ಜನರು ಪರದಾಡುವಂತ ಪರಿಸ್ಥಿತಿ ಇದೆ. ಬಿ.ಸಿ.ರೋಡಿನಲ್ಲಿದ್ದ ಶೌಚಾಲಯವನ್ನು ತೆರವುಗೊಳಿಸಿ ಅಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲಾಗಿದೆ.ಮಿನಿವಿಧಾನಸೌಧದಲ್
ಪ್ರತಿ ಭಾನುವಾರ ಬಿ.ಸಿ.ರೋಡಿನಲ್ಲಿ ರಸ್ತೆಬದಿ ತರಕಾರಿ ಇನ್ನಿತರ ಮನೆ ಬಳಕೆ ಸಾಮಾಗ್ರಿಗಳನ್ನು ಮಾರಾಟಮಾಡುವ ಬೀದಿಬದಿ ವ್ಯಾಪಾರಸ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂತೆ ಮಾರುಕಟ್ಟೆ ನಿರ್ಮಿಸಿಕೊಡುವಂತೆ ದಲಿತ ಮುಖಂಡ ರಾಜಪಲ್ಲಮಜಲು ಆಗ್ರಹಿಸಿದರು. ಇದಕ್ಕೆ ಬೀದಿಬದಿ ವ್ಯಾಪಾರಸ್ಥರಿಗೆ ಶುಲ್ಕವನ್ನು ವಿಧಿಸಿದರೆ ಪುರಸಭೆಗೂ ಆದಾಯಬರಬಹುದು, ಸಾರ್ವಜನಿಕರಿಗೆ ಕೂಡ ಅನುಕೂಲವಾಗುವುದು ಎಂದು ಸಲಹೆ ನೀಡಿದರು. ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರು ಈ ನಿಟ್ಟಿನಲ್ಲಿ ಬಿ.ಸಿ.ರೋಡ್ ನಲ್ಲಿ ಸ್ಥಳ ಪರಿಶೀಲಿಸಿ ವಾರದ ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.
ಬಿ.ಸಿ.ರೋಡಿನಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಭವನಕ್ಕೆ ಹೊರಭಾಗದಲ್ಲಿ ಅಡುಗೆ ಕೋಣೆ ನಿರ್ಮಾಣಕ್ಕೆ ಅನುದಾನ ಮೀಸಲಿಡುವಂತೆಯು ರಾಜಪಲ್ಲಮಜಲು ಮನವಿ ಮಾಡಿದರು.ಇದಕ್ಕು ಶೇ.24.5ರಲ್ಲಿ ಅನದಾನ ಕಾದಿರಿಸಲು ಕ್ರಮಕೈಗೊಳ್ಳುವುದಾಗಿ ಮುಖ್ಯಾಧಿಕಾರಿಯವರು ಭರವಸೆ ನೀಡಿದರು. ಕೆಯುಡಬ್ಲುಎಸ್ ವಿರುದ್ದ ಅಸಮಾಧಾನ: ಪುರಸಭಾ ವ್ಯಾಪ್ತಿಯಲ್ಲಿ ಎರಡನೇ ಹಂತದ 24×7 ಕುಡಿಯುವ ನೀರಿನ ಯೋಜನೆಯ ಅನುಷ್ಠಾನದ ವೇಳೆ ಪೈಪ್ ಲೈನ್ ಅಳವಡಿಸಲು ಎಲ್ಲ ರಸ್ತೆಗಳನ್ನು ಅಗೆದು ಆರೆಬರೆ ಕೆಲಸಮಾಡಿರುವ ಕೆಯುಡಬ್ಲುಎಸ್ ವಿರುದ್ದ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಯಿತು. ಹೊಸ,ಹೊಸ ಕಾಂಕ್ರೇಟ್ ರಸ್ತೆ,ಡಾಮಾರು ರಸ್ತೆಯನ್ನು ಅಗೆದೆ ಹಾಕಿ ಬಳಿಕ ಅದನ್ನು ಸಮರ್ಪಕವಾಗಿ ಮುಚ್ಚದೆ ಮತ್ತು ಹಿಡಿದ ಕೆಲಸವನ್ನು ಅಪೂರ್ಣಗೊಳಿಸಿರುವುದು ಸಹಿತ ಕೆಯುಡಬ್ಲುಎಸ್ ನ ಅಸಮರ್ಪಕ ಕಾಮಗಾರಿ ವಿರುದ್ದ ದೂರುಗಳ ಸುರಿಮಳೆಯೇ ಹರಿದು ಬಂತು.
ಈ ಬಗ್ಗೆ ಸಂಬಂಧಪಟ್ಟ ವರನ್ನು ಕರೆಸಿ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಭರವಸೆಯಿತ್ತರು. ಪುರಸಭಾ ವ್ಯಾಪ್ತಿಯಲ್ಲಿ ಪುಟ್ ಪಾತ್ ಇಲ್ಲದೆ ಪಾದಚಾರಿಗಳಿಗಾಗುವ ತೊಂದರೆ,ಬಿ.ಸಿ.ರೋಡಿನಲ್ಲಿರುವ ಪುಟ್ ಪಾತ್ ನ್ನು ದ್ವಿಚಕ್ರ ಸಹಿತ ಕೆಲ ವಾಹನಗಳು ಅತಿಕ್ರಮಿಸಿ ಪಾರ್ಕ್ ಮಾಡುತ್ತಿರುವುದು,ಬಂಟ್ವಾಳ ಪೇಟೆ ಅಗಲೀಕರಣ,ಕಸ ವಿಲೇವಾರಿ,ಅನಧಿಕೃತ ಪ್ಲೆಕ್ಸ್ ಗಳ ಹಾವಳಿ ಮೊದಲಾದ ಸಮಸ್ಯೆಗಳ ಬಗ್ಗೆ ನಾಗರಿಕ ಪ್ರತಿನಿಧಿಗಳಾದ ಪ್ರೊ. ತುಕಾರಾಮ ಪೂಜಾರಿ, ದಾಮೋದರ್ ಸಂಚಯಗಿರಿ, ಶಿವಶಂಕರ್ ಮತ್ತಿತರರು ಸಭೆಯ ಗಮನಸೆಳೆದರು. ಮ್ಯಾನೇಜರ್ ಲೀಲಾವತಿ, ಸಮುದಾಯ ಸಂಘಟಕಿ ಉಮಾವತಿ, ಕಿರಿಯ ಅಭಿಯಂತರ ಡೊಮಿನಿಕ್ ಡಿಮೆಲ್ಲೊ, ಅಕೌಂಟೆಂಟ್ ಸಮ್ಮಿ ವಿಲ್ಸನ್ ಲೋಬೊ, ಕಿರಿಯ ಅಭಿಯಂತರರ ಸಹಾಯಕ ಇಕ್ಬಾಲ್, ಪ್ರಥಮ ದರ್ಜೆ ಸಹಾಯಕರಾದ ಅಬ್ದುಲ್ ರಝಾಕ್, ಮೀನಾಕ್ಷಿ ಉಪಸ್ಥಿತರಿದ್ದರು.

