ಶ್ರೀನಿವಾಸಪುರ: ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾದಲ್ಲಿ ಬಿಇಒ ಉಮಾದೇವಿ ನೇತೃತ್ವದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ನಡೆಸಲಾಯಿತು. ಸಮೀಕ್ಷೆ ಸಂದರ್ಭದಲ್ಲಿ ಆಯಿಷಾ ತಾಜ್ ಎಂಬ ವಿದ್ಯಾರ್ಥಿನಿ ಶಾಲೆಯಿಂದ ಹೊರಗುಳಿದಿರುವುದು ಪತ್ತೆಯಾಯಿತು. ಆಯಿಷಾ ತಾಜ್ 7ನೇ ತರಗತಿ ಪಾಸಾಗಿದ್ದು, 8ನೇ ತರಗತಿಗೆ ಹೋಗದೆ ಮನೆಯಲ್ಲಿಯೇ ಇದ್ದಳು.
ಪೋಷಕರನ್ನು ಸಂಪರ್ಕಿಸಿ ಶಾಲೆಗೆ ಸೇರಿಸುವಂತೆ ಮನವೊಲಿಸಲಾಯಿತು. ಪೋಷಕರು ತಮ್ಮ ಮಗಳನ್ನು ಮತ್ತೆ ಶಾಲೆಗೆ ಕಳಿಸುವ ಭರವಸೆ ನೀಡಿದರು. ಬಿಆರ್ಸಿ ಸಮನ್ವಯಾಧಿಕಾರಿ ವಸಂತ, ಇಸಿಒಗಳಾದ ಅಮರನಾಥ್, ಹನುಮೇಗೌಡ, ಉರ್ದು ಸಿ ಆರ್ ಪಿ ರೂಹಿನಾಜ್ ಇದ್ದರು.
Attachments area

