ಮಂಗಳೂರು : ಕರಾವಳಿ ಪ್ರದೇಶವಾದ ಮುಲ್ಕಿಯ ಕಿಲ್ಪಾಡಿ ಎಂಬಲ್ಲಿ ಇತಿಹಾಸ ಪ್ರಸಿದ್ಧ ಹಾಗೂ ರಾಜಮನೆತನದಿಂದ ಬಳುವಳಿಯಾಗಿ ಬಂದಿರುವ ಪರಿಯಾಳ ಸಮಾಜ ಸಾಲಿಯಾನ್ ಕುಟುಂಬದ ಶ್ರೀ ನಾಗಬ್ರಹ್ಮಸ್ಥಾನದಲ್ಲಿ ಪುನರಪಿ ಪ್ರತಿಷ್ಟಾ ಕಾರ್ಯಕ್ರಮಗಳು ಶೀಘ್ರದಲ್ಲಿ ನಡೆಯಲಿದೆ.
ಈ ನಿಮಿತ್ತ ಈ ಕಾರ್ಯಗಳು ಸಾಂಗವಾಗಿ ನಡೆಯಲು ಇಂದು ಸಮಿತಿಯೊಂದನ್ನು ರಚಿಸಿದ್ದು, ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸಾಲಿಯಾನ್ ಕುಟುಂಬದ ಈ ಪುಣ್ಯ ಭೂಮಿಯಲ್ಲಿ ಇಲ್ಲಿಯವರೆಗೆ ಕಟ್ಟು ಕಟ್ಟಳೆ ರಿವಾಜುಗಳನ್ನು ಬಿಟ್ಟರೆ ಯಾವುದೇ ವಿಶೇಷ ಕಾರ್ಯಕ್ರಮಗಳು ನಡೆದಿರುವುದಿಲ್ಲ. ಹಾಗಾಗಿ ಪುನರ್ ಪ್ರತಿಷ್ಟಾ ಕಾರ್ಯಕ್ರಮದ ನಿಮಿತ್ತ ಶ್ರೀ ನಾಗಮಂಡಲೋತ್ಸವ, ಸಿರಿಸಿಂಗಾರ ನೇಮೋತ್ಸವ ಶ್ರೀ ದೈವಗಳ ತಂಬಿಲ ಸೇವೆ ಹಾಗೂ ವಿವಿಧ ದೈವೀ ಕಾರ್ಯಗಳು ಫೆಬ್ರವರಿ ಮಾರ್ಚ್ ತಿಂಗಳಿನಲ್ಲಿ ನೆರವೇರಲಿದೆ. ಇನ್ನು ಈ ಸಂಧರ್ಭದಲ್ಲಿ ಪುನರ್ ಪ್ರತಿಷ್ಟಾ ಕಾರ್ಯಕ್ರಮದ ಸವಿವರಗಳನ್ನು ಒಳಗೊಂಡ ಆಮಂತ್ರಣ ಪತ್ರವು ಮನವಿ ರೂಪದಲ್ಲಿ ಬಿಡುಗಡೆಗೊಂಡಿದೆ.


