Bysuddi9

Jan 7, 2020
ಬಂಟ್ವಾಳ : ತಾಲ್ಲೂಕಿನ ಬಡ್ಡಕಟ್ಟೆ ಶ್ರೀ ನಿತ್ಯಾನಂದ ಗೋವಿಂದ ಸ್ವಾಮಿ ಭಜನಾ ಮಂದಿರದಲ್ಲಿ ಸೋಮವಾರ ನಡೆದ ಪ್ರತಿಷ್ಠಾ ವರ್ಧಂತಿ ಉತ್ಸವ ಕಾರ್ಯಕ್ರಮದಲ್ಲಿ ಸ್ವಾಮೀಜಿದ್ವಯರ ವಿಗ್ರಹಕ್ಕೆ ಸ್ವತಃ ಸೀಯಾಳ ಅಭಿಷೇಕ ನೆರವೇರಿಸಲು ಭಕ್ತರು ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ. 
ಬಡ್ಡಕಟ್ಟೆ: ಶ್ರೀ ನಿತ್ಯಾನಂದ ಸ್ವಾಮಿ ಭಜನಾ ಮಂದಿರ ಪ್ರತಿಷ್ಠಾ ವರ್ಧಂತಿ ಉತ್ಸವ, ಸ್ವಾಮೀಜಿದ್ವಯರ ವಿಗ್ರಹಕ್ಕೆ ಭಕ್ತರಿಂದ ಸ್ವತಃ ಸೀಯಾಳಾಭಿಷೇಕ ಹಾಗು 28ನೇ ವರ್ಷ ಮತ್ತು ಸದ್ಗುರು ಗೋವಿಂದ ಸ್ವಾಮೀಜಿ ಅವರ 11ನೇ ವರ್ಷದ ವಿಗ್ರಹ ಪ್ರತಿಷ್ಠಾ ವರ್ಧಂತಿ ಉತ್ಸವ ಪ್ರಯುಕ್ತ ಭಕ್ತರು ಸ್ವಾಮೀಜಿದ್ವಯರ ವಿಗ್ರಹಕ್ಕೆ ಸ್ವತಃ ಸೀಯಾಳ ಅಭಿಷೇಕ ನೆರವೇರಿಸಿದರು. 
ಇದೇ ವೇಳೆ ಗಣಯಾಗ, ಭಜನೆ, ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.  ಆಡಳಿತ ಸಮಿತಿ ಅಧ್ಯಕ್ಷ ಬಿ.ಯೋಗೀಶ ಸಪಲ್ಯ, ಅರ್ಚಕ ಚಂದ್ರಶೇಖರ ಭಟ್, ರಾಜೇಶ ಭಟ್, ಪ್ರಮುಖರಾದ ಜೆ.ಗಜೇಂದ್ರ ಪ್ರಭು, ಬಿ.ದಿನೇಶ ಭಂಡಾರಿ, ಹರೀಶ ಬಡ್ಡಕಟ್ಟೆ, ಸುಲೋಚನಾ ಎಸ್.ಜಕ್ರಿಬೆಟ್ಟು, ಮೋಹನ್ ಕೆ.ಶ್ರೀಯಾನ್ ರಾಯಿ ಮತ್ತಿತರರು ಇದ್ದರು. ಮಾಜಿ ಸಚಿವ ಬಿ.ರಮಾನಾಥ ರೈ, ಕಲಾವಿದ ವಿಜಯ ಕುಮಾರ್ ಕೊಡಿಯಾಲ್ ಬೈಲು ಸಹಿತ ಅಪಾರ ಮಂದಿ ಭಕ್ತರು ಪಾಲ್ಗೊಂಡರು.

By suddi9

Leave a Reply

Your email address will not be published. Required fields are marked *