ಉಡುಪಿ : ಸ್ವಚ್ಛ ಭಾರತ್ ಫ್ರೆಂಡ್ಸ್ ನೇತೃತ್ವದಲ್ಲಿ ಬೀಟ್ ದ ಪ್ಲಾಸ್ಟಿಕ್ ಪೊಲ್ಯೂಷನ್ ಪರಿಸರ ಸ್ನೇಹಿ ಅಭಿಯಾನವು ಅಜ್ಜರಕಾಡು ಉದ್ಯಾನವನದಲ್ಲಿ ಡಿ.4 ರಂದು ನಡೆಯಿತು. ಹಿರಿಯ ನಾಗರಿಕ ವೇದಿಕೆ ಮಾಜಿ ಕೋಶಾಧಿಕಾರಿ ಎಂ.ಬಿ ನಾಯಕ್ ಅಭಿಯಾನಕ್ಕೆ ಚಾಲನೆ ನೀಡಿದರು. ಸಾರ್ವಜನಿಕರಿಗೆ ಕರಪತ್ರದ ಮೂಲಕ ಜಾಗ್ರತಿ ಮೂಡಿಸಿದ ಬಳಿಕ ಯುದ್ಧ ಸ್ಮಾರಕದ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಚತಾ ಅಭಿಯಾನ ಮತ್ತು ಗಿಡಗಳಿಗೆ ನೀರುಣಿಸಲಾಯಿತು.ಈ ಸಂದಭ೯ದಲ್ಲಿ ಉದಯ ನಾಯ್ಕ, ರಾಘವೇಂದ್ರ ನಾಯಕ್, ವಾದಿರಾಜ್, ರಾಘವೇಂದ್ರ ಪ್ರಭು, ಕವಾ೯ಲು ನಿರೂಪಿಸಿದರು.

