ಕೋಲಾರ : ಯುವ ಮತದಾರರನ್ನು ಮತದಾರರ ಪಟ್ಟಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳಿಸಲು  ಜನವರಿ 06 ರಿಂದ ಜನವರಿ 08 ರವರೆಗೆ  ರವರೆಗೆ ವಿಶೇಷವಾಗಿ ಎಲ್ಲಾ ವಿದ್ಯಾ ಸಂಸ್ಥೆಗಳಲ್ಲಿ ಮತದಾರರ ಸಾಕ್ಷರತಾ ಕ್ಲಬ್‍ಗಳ ಮೂಲಕ “ಮಿಂಚಿನ ನೋಂದಣಿ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್ ಅವರು ತಿಳಿಸಿದ್ದಾರೆ.  IMG_20200103_201324 (1)
ಭಾವಚಿತ್ರವುಳ್ಳ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ 2020 ರ ಸಂಬಂಧ ದಿನಾಂಕ: 16-12-2019 ರಿಂದ ಜನವರಿ 15 2020 ಕ್ಕೆ 18 ವರ್ಷ ಪೂರ್ಣಗೊಳ್ಳುವ ಯುವಕ ಮತ್ತು ಯುವತಿಯರು ತಮ್ಮ ಹೆಸರನ್ನು ಹೊಸದಾಗಿ ಮತದಾರರ ಪಟ್ಟಿಗೆ ನೋಂದಾಯಿಸಲು ನಮೂನೆ-6 ರಲ್ಲಿ ತಾವು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾಸಂಸ್ಥೆಯಲ್ಲಾಗಲೀ, ತಮ್ಮ ಭಾಗದ ಮತಗಟ್ಟೆ ಹಂತದ ಅಧಿಕಾರಿಗೆ, ತಾಲ್ಲೂಕು ಕಛೇರಿಗೆ ಹಾಗೂ ಭಾರತ ಚುನಾವಣಾ ಆಯೋಗದ ಆನ್‍ಲೈನ್ ವೆಬ್‍ಸೈಟ್ www.nvsp.inಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಜನವರಿ 01 2020 ಕ್ಕೆ ಅನ್ವಯವಾಗುವಂತೆ 18 ವರ್ಷಗಳನ್ನು ಪೂರೈಸಿದ ಯುವ ಮತದಾರರು ನಮೂನೆ-6 ನ್ನು ಅಂತರ್ಜಾಲದಲ್ಲಿ ಆನ್‍ಲೈನ್ ವೆಬ್‍ಸೈಟ್ www.nvsp.in ಮೂಲಕ ಅಥವಾ ನೇರವಾಗಿ ಭರ್ತಿ ಮಾಡಿ ಪೂರಕ ದಾಖಲೆಗಳೊಂದಿಗೆ ಕಡ್ಡಾಯವಾಗಿ ತಮ್ಮ ಭಾಗದ ಮತಗಟ್ಟೆ ಹಂತದ ಅಧಿಕಾರಿ (ಬಿ.ಎಲ್.ಒ.) ರವರುಗಳಿಗೆ ಅಥವಾ ಅವರ ತಾಲ್ಲೂಕಿನ ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ ಸಲ್ಲಿಸಬಹುದಾಗಿರುತ್ತದೆ.
“ಮಿಂಚಿನ ನೋಂದಣಿ” ಯ ಎಲ್ಲಾ ದಿನಾಂಕಗಳಂದು ಮತಗಟ್ಟೆ ಹಂತದ ಅಧಿಕಾರಿಗಳು ಅವರುಗಳ ಮತದಾನ ಕೇಂದ್ರಗಳಲ್ಲಿ ಉಪಸ್ಥಿತರಿದ್ದು, ಅವರ ಭಾಗದಲ್ಲಿ ಸಲ್ಲಿಸಲಾಗುವ ನಮೂನೆ-6 ರಲ್ಲಿ ಅರ್ಜಿಗಳನ್ನು ಸ್ವೀಕರಿಸಲಿರುತ್ತಾರೆ.
ಈ ಮಿಂಚಿನ ನೋಂದಣಿ ಅವಧಿಯಲ್ಲಿ ಪದವೀಧರರ ಮತದಾರರ ಪಟ್ಟಿಗಳಿಗೆ ಹೆಸರನ್ನು ಸೇರ್ಪಡೆಗೊಳಿಸಲು ದಿನಾಂಕ: 1-11-2016 ಕ್ಕೂ ಮುಂಚಿತವಾಗಿ ಪದವೀಧರರಾಗಿರುವ ಅರ್ಹ ಪದವೀಧರರೂ ಸಹ ನಮೂನೆ-18 ರಲ್ಲಿ ಅರ್ಜಿಗಳನ್ನು ಅವರ ಭಾಗದ ಮತಗಟ್ಟೆ ಹಂತದ ಅಧಿಕಾರಿಗಳಿಗೆ ಸಲ್ಲಿಸಬಹುದಾಗಿರುತ್ತದೆ.
ಆದುದರಿಂದ, ಈ ವಿಶೇಷ ಸದಾವಕಾಶವನ್ನು ಎಲ್ಲಾ ಯುವಕರು, ಯುವತಿಯರು, ಸಾರ್ವಜನಿಕರು ಮತ್ತು ಮನ್ನಣೆ ಪಡೆದ ರಾಜಕೀಯ ಪಕ್ಷಗಳವರು ಸದುಪಯೋಗಪಡಿಸಿಕೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಜೆ. ಮಂಜುನಾಥ್  ಅವರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *