ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಭದ್ರಕಾಳಿ ದೇವಿಯ ವಾರ್ಷಿಕ ಗಾಯತ್ರಿ ಪೂಜೆಯುಡಿ.31 ರಂದು ಮಂಗಳವಾರ ರಾತ್ರಿ ನಡೆಯಿತು. ದೇವರ ಪೂಜೆ ನಡೆದ ನಂತರ ಬಲಿ ಉತ್ಸವ ನಡೆಯುತ್ತದೆ ನಂತರ ಗಾಯತ್ರಿ ಪೂಜೆ ನೆರವೇರುತ್ತದೆ.ದೇವಳದ ತಂತ್ರಿಗಳು ಹಾಗೂ ಅರ್ಚಕರು ಪೂಜೆ ನೆರವೇರಿಸುತ್ತಾರೆ.
ಸಾವಿರಾರು ಭಕ್ತಾಧಿಗಳು ಪಾಲ್ಗೊಳ್ಳುತ್ತಾರೆ ನಂತರ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಮಾಡುತ್ತಾರೆ. ಮರುದಿನ ಬೆಳಗ್ಗೆ ಸಾವಿರ ಸೀಮೆಯ ಭಕ್ತಾಧಿಗಳು ಗಾಯತ್ರಿ ಪೂಜೆಯ ತೀರ್ಥ ಪ್ರೋಕ್ಷಣೆ ಮಾಡಿಸಿ ಮನೆಮನೆಗೆ ಕೊಂಡೊಯ್ಯುತ್ತಾರೆ.
