ಕುಪ್ಪೆಪದವು:ಶ್ರೀಕ್ಷೇತ್ರ ಕಟೀಲಿನಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಕುರಿತಂತೆ ಭಕ್ತಾಭಿಮಾನಿಗಳ ಸಭೆಯು ಕುಪ್ಪೆಪದವು ಶ್ರೀ ದುರ್ಗೇಶ್ವರೀ ದೇವಸ್ಥಾನದಲ್ಲಿ ಬುಧವಾರ ಸಾಯಂ ಕಾಲ  ಜರಗಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಕಟೀಲು ಸದಾನಂದ ಅಸ್ರಣ್ಣ ಅವರು  ಜನವರಿ 22 ರಿಂದ ಬ್ರಹ್ಮಕಲಶೋತ್ಸವದ ಕಾರ್ಯಗಳು ಪ್ರಾರಂಭವಾಗಲಿದ್ದು, ಜನವರಿ 24 ರಂದು ನೂತನ  ಧ್ವಜಸ್ತಂಭ ಸ್ಥಾಪನೆ, 29 ರಂದು ಬ್ರಹ್ಮಕಲಶಾಭಿಷೇಕ, ಫೆಬ್ರವರಿ ಒಂದರಂದು ನಾಗಮಂಡಲ ಸೇವೆ, 2 ನೆ ತಾರೀಕಿನಂದು ಕೋಟಿಜಪಯಜ್ಞ ಹಾಗೂ 3 ರಂದು ಸಹಸ್ರಚಂಡಿಕಾಯಾಗ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು,
IMG-20191226-WA0045 (1)ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಆಹ್ವಾನಿಸಿ ಕ್ಷೇತ್ರ ದಲ್ಲಿ ಸೇವೆ ಮಾಡುವ ಇಚ್ಛೆ ಇರುವ ಭಕ್ತರು ಕರಸೇವಕರಾಗಿ ಕೆಲಸ ಮಾಡುವ ಅವಕಾಶವಿದೆ .ಇಚ್ಚೆ ಇರುವವರು ಹೆಸರು ನೋಂದಾಯಿಸಿ ಕೊಳ್ಳಬಹುದು ಎಂದರು. ಅಲ್ಲದೆ  ಕೋಟಿಜಪಯಜ್ಞದ ದೀಕ್ಷೆ ಪಡೆದುಕೊಂಡವರು ಪಾಲಿಸಬೇಕಾದ ನಿಯಮಾನುಷ್ಠಾನಗಳ ಬಗ್ಗೆ ವಿವರಿಸಿ, ದೀಕ್ಷೆ ಪಡೆದುಕೊಳ್ಳುವ ಆಸಕ್ತಿ ಇರುವವರಿಗಾಗಿ ಜನವರಿ 22 ರಂದು ಮತ್ತೊಮ್ಮೆ ದೀಕ್ಷಾ ಕಾರ್ಯಕ್ರಮ ನಡೆಯಲಿದೆ ಎಂದರು.
IMG-20191226-WA0025
ಬ್ರಹ್ಮಕಲಶೋತ್ಸವ ಪ್ರಚಾರ ಸಮಿತಿಯ ಅಧ್ಯಕ್ಷ, ಜಿ ಪಂ ಸದಸ್ಯ ಜನಾರ್ಧನ ಗೌಡ ಮುಚ್ಚೂರು ಸಭೆಯಲ್ಲಿ ಮಾತನಾಡಿ ಬ್ರಹ್ಮಕಲಶೋತ್ಸವದ ಯಶಸ್ವಿಗೆ ಎಲ್ಲರ ಸಹಕಾರ ಕೋರಿದರು.ದುರ್ಗೇಶ್ವರಿ ದೇವಸ್ಥಾನದ ಆಡಳಿತ ಟ್ರಸ್ಟ್ ನ ಅಧ್ಯಕ್ಷ ಪ್ರವೀಣ್ ಕುಮಾರ್ ಅಗರಿ,ಟ್ರಸ್ಟ್ ನ  ಸದಸ್ಯರುಗಳಾದ ಸಂಜೀವ ಶೆಟ್ಟಿ,ಪುರುಷೋತ್ತಮ ಕೆ,ವಿಕ್ರಮ್ ಭಟ್,ರಾಮಣ್ಣ ನಾಯ್ಕ್,ಅರ್ಚಕರಾದ ಸದಾಶಿವ ಕಾರಂತ್,  ಕಟೀಲು ಗುರುರಾಜ ಉಡುಪ,ದುರ್ಗೇಶ್ವರೀ ಸೇವಾ ಸಮಿತಿಯ ಅಧ್ಯಕ್ಷ ಜಗದೀಶ ಕುಲಾಲ್ ಪಾತಾಜೆ, ಕಿಲೆಂಜಾರು, ಕುಳವೂರು ಮತ್ತು ಮುತ್ತೂರು ಗ್ರಾಮಗಳ  ಹಿರಿಯರು,  ಮುಖಂಡರುಗಳು, ಭಕ್ತಾದಿಗಳು ಸಭೆಯಲ್ಲಿ ಹಾಜರಿದ್ದರು.ಶಿವರಾಮ ಕಾರಂತ್ ಸಭೆಯನ್ನು ನಡೆಸಿಕೊಟ್ಟರು.
IMG-20191226-WA0026 (1)

By suddi9

Leave a Reply

Your email address will not be published. Required fields are marked *