ಮಂಗಳೂರು : ಇದು 150 ವರ್ಷಗಳ ನಂತ್ರ ನಡೆಯುತ್ತಿರುವ ಕಂಕಣ ಸೂರ್ಯ ಗ್ರಹಣ ಆಗಿದ್ದು, ದೇಶ ವಿದೇಶದಲ್ಲಿ ಯಾವ ಯಾವ ಭಾಗದಲ್ಲಿ ಗ್ರಹಣ ಘೋಚರಿಸಲಿದೆ ಎಂಬುದಾಗಿ ಈ ಕೆಳಗಿದೆ ನಿಮಗಾಗಿ ಮಾಹಿತಿ.. ಇಲ್ಲಿದೆ ಕಂಕಣ ಸೂರ್ಯ ಗ್ರಹಣ ಎಲ್ಲಿ .? ಯಾವಾಗ ಗೋಚರಿಸಲಿದೆ ಎಂಬ ಮಾಹಿತಿ ಭಾರತದಲ್ಲಿ ಬೆಳಿಗ್ಗೆ 7.59ರಿಂದ ಆರಂಭವಾಗುವ ಕಂಕಣ ಸೂರ್ಯ ಗ್ರಹಣ, 40.47ಕ್ಕೆ ಅಥವಾ 11.04ಕ್ಕೆ ಕೊನೆಗೊಳ್ಳಲಿದೆ.
ಬೆಂಗಳೂರು, ಮಂಗಳೂರು, ಕೊಯಮತ್ತೂರು, ದಿಂಡಿಗಲ್ ಸೇರಿದಂತೆ ದಕ್ಷಿಣ ಭಾರತದಲ್ಲಿ ಬಹುತೇಕ ಪೂರ್ಣ ಪ್ರಮಾಣದ ಕಂಕಣ ಸೂರ್ಯ ಗ್ರಹಣ ಗೋಚರಿಸಲಿದೆ. ಬೆಂಗಳೂರಿನಲ್ಲಿ ಶೇ.89.4, ಹೈದರಾಬಾದ್ ನಲ್ಲಿ ಶೇ.66, ಅಹಮದಾಬಾದ್ ನಲ್ಲಿ ಶೇ.44.7, ಚೆನ್ನೈನಲ್ಲಿ ಶೇ.78.8, ಮುಂಬೈನಲ್ಲಿ ಶೇ.74.3, ದೆಹಲಿಯಲ್ಲಿ ಶೇ.44.7 ಹಾಗೂ ಕೊಲ್ಕತ್ತಾದಲ್ಲಿ ಶೇ.45.1ರಷ್ಟು ನಾಳೆ ನಡೆಯಲಿರುವ ಕಂಕಣ ಸೂರ್ಯ ಗ್ರಹಣ ಗೋಚರಿಸಲಿದೆ. ಸೌದಿ ಅರೇಬಿಯಾ, ಖತಾರ್, ಯುಎಇ, ಒಮನ್, ಶ್ರೀಲಂಕಾ, ಮಲೇಷ್ಯಾ, ಇಂಡೋನೇಷ್ಯಾ, ಸಿಂಗಾಪುರ ಸೇರಿದಂತೆ ಇತರೆ ದೇಶಗಳಲ್ಲಿ ಕಂಕಣ ಸೂರ್ಯ ಗ್ರಹಣ ಗೋಚರಿಸುವುದಿಲ್ಲ.
ಅಂದಹಾಗೇ ಕಳೆದ 2010ರ ಜನವರಿ 15ರಂದು 10 ವರ್ಷಗಳ ಹಿಂದೆ ಇದೇ ಕಂಕಣ ಸೂರ್ಯ ಗ್ರಹಣ ಸಂಭವಿಸಿದ್ದರೂ, ಗೋಚರಿಸಿದ್ದು ಮಾತ್ರ ಕೇವಲ 11 ನಿಮಿಷ 8 ಸೆಕೆಂಡ್ ಕಾಲವಾಗಿದೆ. ಸೋ ಈ ಸ್ಥಳಗಳಲ್ಲಿ ಮಾತ್ರ ಕಂಕಣ ಸೂರ್ಯ ಗ್ರಹಣ ಗೋಚರಿಸಲಿದ್ದು, ಮಿಸ್ ಮಾಡದೇ ನೋಡಿ. ಮತ್ತೆ ಇಂತಹ ಸೂರ್ಯ ಗ್ರಹಣ ನೋಡುವ ಭಾಗ್ಯ ಹತ್ತು ವರ್ಷಗಳ ನಂತ್ರ. ಆದ್ರೇ.. ತಪ್ಪದೇ ಕಣ್ಣಿಗೆ ಸೂಕ್ತವಾದ ಮಸೂರಗಳನ್ನು ಬಳಸಿ ನೋಡಬೇಕು. ತಪ್ಪದೇ ನೋಡುಗರು ಈ ಎಚ್ಚರಿಕೆ ವಹಿಸೋದು ಮರೆಯ ಬೇಡಿ.

