ಬಂಟ್ವಾಳ: ಪೆಟ್ರೋಲ್ ಪಂಪ್ ನಲ್ಲಿ ರಾತ್ರಿವೇಳೆ ನಿಲ್ಲಿಸಲಾಗಿದ್ದ ಬಸ್ ಗಳ ಬ್ಯಾಟರಿ ಕಳವು ಮಾಡಿದ್ದಾನೆಂಬ ಆರೋಪದಲ್ಲಿ ಯುವಕನೋರ್ವನನ್ನು ಬಂಟ್ವಾಳ ನಗರ ಪೊಲೀಸರು ಮಂಗಳವಾರ ಬಿ.ಸಿ.ರೋಡಿಗೆ ಸಮೀಪದ ಕೈಕಂಬ ದಲ್ಲಿ ಬಂಧಿಸಿದ್ದಾರೆ.
ಕಡಬ ತಾಲೂಕಿನ ಕಂತೂರು ಗ್ರಾಮದ ಏರ್ಮಾಲ ಅಬ್ದುಲ್ಲಾ ಅವರ ಪುತ್ರ ರಾಝಿಕ್ (24)ಬಂಧಿತ ಆರೋಪಿಯಾಗಿದ್ದಾನೆ.ಈತನಿಂದ ಸುಮಾರು 25 ಸಾವಿರ ರೂ ಮೌಲ್ಯದ ಬ್ಯಾಟರಿಯನ್ನು ಪೊಲೀಸರು ವಶಪಡಿಸಿಕೊಳ್ಳಲಾಗಿದೆ.
ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ಅವರು ರಾತ್ರಿಗಸ್ತಿನಲ್ಲಿದ್ದ ವೇಳೆ ಕೈಕಂಬ ಬಸ್ ನಿಲ್ದಾಣ ದಲ್ಲಿ ನಿಂತು ಕೊಂಡಿದ್ದ ಈತ ಪೊಲೀಸರನ್ನುಕಂಡು ಓಡಲಾರಂಬಿಸಿದ್ದನೆನ್ನಲಾಗಿದೆ.ಇದರಿಂ
ಕಡಬ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ದ ಬೇರೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.ಎ.ಎಸ್.ಪಿ.ಸೈದುಲು ಅಡಾವತ್ ಅವರ ಮಾರ್ಗದರ್ಶನ ದಲ್ಲಿ , ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್ ಅವರ ನೇತ್ರತ್ವದಲ್ಲಿಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ಮತ್ತವರ ಸಿಬಂದಿಗಳು ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಕೃತ್ಯ ಬಯಲಿಗೆ ಬಂದಿದ್ದ ಸಂದರ್ಭ ಇಂತಹ ಘಟನೆ ನಡೆದೆ ಇಲ್ಲ,ಇದರ ಕುರಿತು ಯಾವುದೇ ಬಸ್ ಮಾಲೀಕರಾಗಲೀ,ಚಾಲಕರಾಗಲೀ ದೂರು ದಾಖಲಿಸಿಲ್ಲ ಎಂದು ಬಂಟ್ವಾಳ ನಗರ ಪೊಲೀಸರು ತಿಳಿಸಿದ್ದರು.
