ಬಂಟ್ವಾಳ: ಪೌರತ್ವ ಕಾಯ್ದೆಯ ವಿರುದ್ಧ ಶಾಸಕ ಯು.ಟಿ.ಖಾದರ್ ಅವರು ನೀಡಿರುವ ಪ್ರಚೋಧನಕಾರಿ ಹೇಳಿಕೆಯಿಂದ ಸಮಾಜದ ಶಾಂತಿ ಕದಡಿಸಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಹಿಂದೂ ಜಾಗರಣ ವೇದಿಕೆ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದೆ. ಶಾಸಕರ ಹೇಳಿಕೆಯಿಂದ ಅವರ ಆಪ್ತರು ಹಾಗೂ ಕಿಡಿಗೇಡಿಗಳು ಪ್ರತಿಭಟನೆಯ ನೆಪದಲ್ಲಿ ಬೆಂಕಿ ಹಚ್ಚುವ ಪ್ರಯತ್ನ ಮಾಡಿದ್ದಲ್ಲದೆ ಪೊಲೀಸ್ ಠಾಣೆಗೂ ಬೆಂಕಿ ಹಚ್ಚುವ ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮಂಗಳೂರಿನಲ್ಲಿ ಸಾರ್ವಜನಿಕರ ಆಸ್ತಿಪಾಸ್ತಿಗಳನ್ನು ಹಾನಿಯನ್ನುಂಟು ಮಾಡಲಾಗಿದ್ದು,ಪರಿಣಾಮ ಅಪಾರ ನಷ್ಟ ಉಂಟಾಗಿರುವುದರಿಂದ ಶಾಸಕ ಯು.ಟಿ.ಖಾದರ್ ಅವರನ್ನು ಬಂಧಿಸಿ, ಗಲಭೆಗೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಹಾಗೆಯೇ ಗಲಭೆಯಲ್ಲಿ ತೊಡಗಿಸಿಕೊಂಡ ವೇಳೆ ಗೋಲಿಬಾರಿನಿಂದ ಮೃತಪಟ್ಟ ಕುಟುಂಬಕ್ಕೆ ಮುಖ್ಯಮಂತ್ರಿಯವರು ಘೋಷಿಸಿರುವ ಹತ್ತು ಲಕ್ಷ ಪರಿಹಾರದ ಬಗ್ಗೆಯು ಪುನರ್ ವಿಮರ್ಶಿ ಸಬೇಕು ಎಂದು ಅವರು ಒತ್ತಾಯಿಸಿ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ರಾಜ್ಯ ಕಾರ್ಯಕಾರಣಿ ಸದಸ್ಯ ರವಿರಾಜ ಬಿ.ಸಿ.ರೋಡು, ಪುತ್ತೂರು ಜಿಲ್ಲಾಧ್ಯಕ್ಷ ಜಗದೀಶ್ ನೆತ್ತರಕೆರೆ , ತಾಲೂಕು ಘಟಕದ ಅಧ್ಯಕ್ಷ ಚಂದ್ರ ಕಲಾಯಿ, ತಾಲೂಕು ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾಮಾಜೆ, ಅಮ್ಟಾಡಿ ಮಂಡಲ ಅಧ್ಯಕ್ಷ ಹರೀಶ್ ತಲೆಂಬಿಲ, ಸದಸ್ಯ ರಾದ ತಿಲಕ್ ಅಮ್ಟಾಡಿ, ಶರಣ್ ಕಾಮಾಜೆ ಉಪಸ್ಥಿತರಿದ್ದರು.
