ಬಂಟ್ವಾಳ; ಬಿಜೆಪಿಯ ಹಿರಿಯ ಮುಖಂಡ,ಸಹಕಾರಿ ಧುರೀಣ ಜಿ.ಆನಂದ(೬೭) ಅವರು ಅಲ್ಪಕಾಲದ ಅಸೌಖ್ಯದಿಂದ  ಮಂಗಳವಾರ ನುಸುಕಿನ ಜಾವ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ  .ವೃತ್ತಿಯಲ್ಲಿ  ಟೈಲರ್ ಉದ್ಯಮ ನಡೆಸುತ್ತಿದ್ದ ಬಂಟ್ವಾಳ ಬಡ್ಡಕಟ್ಟಡಯಲ್ಲಿ ಗಣೇಶ್ ಟೈಲರ್ ವೃತ್ತಿಯನ್ನು ನಡೆಸುತ್ತಿದ್ದರು.ಬಡ್ಡಕಟ್ಟೆ ಸಮೀಪದ  ದೈವಗುಡ್ಡೆಯಲ್ಲಿ ನಿವಾಸ ಹೊಂದಿರುವ ಅವರು ಬಂಟ್ವಾಳ ಪರಿಸರ ಮತ್ತು ಪಕ್ಷದ ಕಾರ್ಯಕರ್ತರು,ನಾಯಕರಲ್ಲಿ’ ಆನಂದಣ್ಣ’ ಎಂದೆ ಚಿರಪರಿಚಿತರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಷ್ಠಾವಂತ ಸ್ವಯಂಸೇವಕರಾಗಿರುವ ಅವರು   1970ರ ದಶಕದ ತುರ್ತುಪರಿಸ್ಥಿತಿಯ ಕಾಲಘಟ್ಟದಲ್ಲಿ ಹೋರಾಟಕ್ಕೆ ದುಮುಕಿ ಸಮಾಜಕ್ಕೆ ಪ್ರೇರಣೆಯನ್ನು ನೀಡಿದವರು. ಜನ ಸಂಘದ ಮೂಲಕ ರಾಜಕಾರಣಕ್ಕೆ ದುಮುಕಿ ಬಂಟ್ವಾಳ ತಾಲೂಕಿನ ಕಕ್ಕೆ ಪದವಿನಿಂದ ಮಂಗಳೂರಿನ ಗುರುಪುರದವರೆಗೆ ಲ್ಯಾಂಬಿ ಸ್ಕೂಟರ್ ನಲ್ಲಿ ಸಂಚರಿಸಿ ಭಾರತೀಯ ಜನತಾ ಪಕ್ಷವನ್ನು ಸಂಘಟಿಸಿದ ಮೇರುವ್ಯಕ್ತಿತ್ವ ಅವರದ್ದು.
IMG-20191210-WA0001
ಎರಡು ಬಾರಿ ಬಂಟ್ವಾಳ ಪುರಸಭೆಯ ಸದಸ್ಯರಾಗಿಯು ಕಾರ್ಯ ನಿರ್ವಹಿಸಿದ್ದರು.  ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಭದ್ರ ತಳಪಾಯಕ್ಕೆ  ಒರ್ವ ಅಗ್ರಪಂಕ್ತಿಯ ನಾಯಕ ಕೂಡ  ಹೌದು.  ಬಿಜೆಪಿ ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಎರಡು ಅವಧಿಯಲ್ಲಿ ಕ್ಷೇತ್ರ ಸಮಿತಿಯ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ ಇವರು ಅಸಂಖ್ಯಾತ ಕಾರ್ಯಕರ್ತರನ್ನು ನಾಯಕರನ್ನಾಗಿ ಜನಪ್ರತಿನಿಧಿಗಳಾಗಿ ಬೆಳೆಸಿದ ಮೇರು ವ್ಯಕ್ತಿತ್ವ ಇವರದ್ದು. 1990 ದಶಕದ ಅಯೋದ್ಯ ಹೋರಾಟದಲ್ಲಿ ಕರಸೇವಕರಾಗಿ ಬಾಗಿಯಾಗಿದ್ದ ಅನಂದಣ್ಣ 2017 ರಲ್ಲಿ  ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ನವರ ನೇತೃತ್ವದ ಪರಿವರ್ತನಾ ಯಾತ್ರೆ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಅಗಮಿಸಿದಾಗ ನಗರ ಅಲಂಕಾರಕ್ಕೆ ಬೇಕಾದ  ಪಕ್ಷದ ಧ್ವಜಗಳನ್ನು ತಮ್ನ ಕೈಯಾರೆ ಸಿದ್ದಪಡಿಸಿ ನಗರ ಅಲಂಕಾರವನ್ನು ಮಾಡಿದವರು.
IMG-20191210-WA0004
 ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಣಿಯೂರು ಶಕ್ತಿ ಕೇಂದ್ರದ ಪ್ರಭಾರಿಗಳಾಗಿ ಇಳಿ ವಯಸ್ಸಿನಲ್ಲೂ ಪಕ್ಷದ ಚಟುವಟಿಕೆಯಲ್ಲಿ ಕ್ರೀಯಾಶೀಲಾವಾಗಿ ಬಾಗಿಯಾಗಿದ್ದರು.ಪ್ರಸ್ತುತ ದಕ್ಷಿಣ ಕನ್ನಡ ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷರಾಗಿ ಜವಬ್ದಾರಿ ನಿರ್ವಹಿಸುತ್ತಿದ್ದ ಅವರು ಮೂರು ಅವಧಿಯಲ್ಲಿ ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಬ್ಯಾಂಕಿನ ಏಳಿಗೆಗೆ ದುಡಿದಿದ್ದಾರೆ.   ಇವರ ಪರಿಶ್ರಮದಿಂದ  ಬಿ.ಸಿ.ರೋಡಿನಲ್ಲಿ ಬ್ಯಾಂಕಿಗೆ ಸ್ವಂತಕಟ್ಟಡ ನಿರ್ಮಾಣ ಹಂತದಲ್ಲಿದೆ.   ವೀಣಧಾರಿಣಿ ಕಲಾ ಯುವಕ ಸಂಘದ ಅಧ್ಯಕ್ಷರಾಗಿಯು ಕಾರ್ಯ ನಿರ್ವಹಿಸುತ್ತಿದ್ದ ಅವರು ಸಹಕಾರ ಭಾರತಿ,ಟೈಲರ್ಸ್ ಆಸೋಸಿಯೇಶನ್ ಹೀಗೆ ಹತ್ತು ಹಲವು ಸಂಘ ಸಂಸ್ಥೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.ನಿತ್ಯಾನಂದ ಸ್ವಾಮಿಯ ಪರಮ ಭಕ್ತರಾಗಿದ್ದ ಅವರು ಧಾರ್ಮಿಕ ಚಟುವಟಿಕೆಯಲ್ಲು ತೊಡಗಿಸಿಕೊಂಡಿದ್ದರು
.
10-04-24-IMG-20191210-WA0002
ಸರಳ ಸಜ್ಜನಿಕೆಯ ಸಕಾರಮೂರ್ತಿಯಾಗಿದ್ದ ಅವರು ಎಲ್ಲರನ್ನು ಪ್ರೀತಿಯಿಂದ ಕಂಡು ನಗುಮುಖದಲ್ಲಿ ಮಾತನಾಡಿಸುತ್ತಿದ್ದರು.ವಿಪಕ್ಷ ನಾಯಕರು ಕೂಡ ಇವರ ನಡೆನುಡಿಯನ್ನು ಮೆಚ್ಚುತ್ತಿದ್ದರು. ಪಕ್ಷದ ಹಿರಿಯ ನಾಯಕರಾದ ಎಲ್.ಕೆ.ಆಡ್ವಾಣಿ,ವಾಜಪೇಯಿ, ಅನಂತಕುಮಾರ್,ಡಿ.ವಿ.ಸದಾನಂದಗೌಡ,ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವಾರು ನಾಯಕರ ನಿಕಟವರ್ತಿಯಾಗಿದ್ದರು.  ಇವರೊಬ್ಬ ದಣಿವರಿಯದ ನಾಯಕನಾಗಿ ಬಿಂಬಿತರಾಗಿದ್ದರು.    ಮೃತರು ಪತ್ನಿ,ಒರ್ವಮಗ,ಒರ್ವಮಗಳು ಸಹಿತ ಅಪಾರ ಬಂಧು,ಬಳಗವನ್ನು ಅಗಲಿದ್ದಾರೆ. ಶೋಕ ; ಜಿ.ಆನಂದ ಅವರ ನಿಧನಕ್ಕೆ ಸಂಸದ,ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್,ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿ,ಮುಖಂಡರಾದ ದೇವದಾಸ ಶೆಟ್ಟಿ,ರಾಮದಾಸ ಬಂಟ್ವಾಳ,ಮೋನಪ್ಪ ದೇವಸ್ಯ,ದಿನೇಶ್ ಭಂಡಾರಿ,ಗೋವಿಂದಪ್ರಭು, ಉದಯಕುಮಾರ್ ರಾವ್,ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭಕೊಟ್ಟಾರಿ,ನಾಗರಾಜ ಶೆಟ್ಟಿ,ಶಕುಂತಲಾ ಶೆಟ್ಟಿ,ಬಿ.ರಮಾನಾಥ ರೈ ,ಆರ್ ಎಸ್ ಎಸ್ ಮುಖಂಡ ಡಾ.ಪ್ರಭಾಕರಭಟ್ ಕಲ್ಲಡ್ಕ ಸಹಿತ ಹಲವಾರು ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *