ಕೈಕಂಬ: ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅವರು ಡಿ.7ರಂದು ಶನಿವಾರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿದರು. ಅವರೊಂದಿಗೆ ರಾಜ್ಯ ಬಿಜೆಪಿ ಯುವಮೋರ್ಚ ಪ್ರ.ಕಾರ್ಯದರ್ಶಿ ಬಿ ವೈ ವಿಜಯೇಂದ್ರ ಬಂಟ್ವಾಳ ಶಾಸಕ ಯು.ರಾಜೇಶ್ ನಾಯಕ್ ಉಳಿಪಾಡಿ, ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಇದ್ದರು.
ಅವರಿಗೆ ದೇವಳದ ವತಿಯಿಂದ ಮಾದವ ಭಟ್, ನಾರಾಯಣ ಭಟ್ ಪ್ರಸಾದ ನೀಡಿದರು. ದೇವಳದ ಆಡಳಿತ ಮೊಕ್ತೇಸರ ಅಮುಂಜೆಗುತ್ತು ಡಾ. ಮಂಜಯ್ಯ ಶೆಟ್ಟಿ, ಮೊಕ್ತೇಸರ ಚೇರ ಸೂರ್ಯನಾರಾಯಣ ರಾವ್, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಅವರು ಉಪ ಮುಖ್ಯಮಂತ್ರಿಗಳನ್ನು ಶಾಲು ಸ್ಮರಣಿಕೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಬಂಟ್ವಾಳ ತಾಹಸೀಲ್ದಾರ್ ರಶ್ಮೀ ಎಸ್ ಆರ್. ಕಂದಾಯ ನಿರೀಕ್ಷಕ ರಾಮ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವ್ ದಾಸ್ ಶೆಟ್ಟಿ, ತಾ. ಪಂ ಸದಸ್ಯ ಯಶವಂತ ಪೊಳಲಿ, ವೆಂಕಟೇಶ್ ನಾವಡ, ಪುರಷೋತ್ತಮ ವಾಮದಪದವು , ರಮಾನಾಥ ರಾಯಿ, ಗಣೇಶ್ ರೈ ಮಾಣಿ, ನಂದರಾಮ ರೈ , ಪವನ್ ಕುಮಾರ್ ,ಸುಬ್ರಾಯ ಕಾರಂತ, ಸುದರ್ಶನ ಬಜ , ಸುಕೇಶ್ ಚೌಟ, ಗೋಪಾಲ ಬಂಗೇರ, ಲೋಕೇಶ್ ಭರಣಿ, ಚಂದ್ರಾಹಾಶ ಶೆಟ್ಟಿ, ಸೋಹನ್ ಅದಿಕಾರಿ, ಚಂದ್ರಶೇಖರ ಶೆಟ್ಟಿ, ಯಶೋಧರ , ಕಾರ್ತಿಕ್ ಬಲ್ಲಾಳ್ ಮತ್ತಿತರರು ಇದ್ದರು.
