ಮಂಚಿ: ಕರ್ನಾಟಕದಲ್ಲಿ ಅಂಗನವಾಡಿಗಳು ಎಳೆಯ ಮಕ್ಕಳ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದೆ. ಕರ್ನಾಟಕ ರಾಜ್ಯ ಅಂಗನವಾಡಿಗಳ ನಿರ್ವಹಣೆಯಲ್ಲಿ ದೇಶದ ಗಮನ ಸೆಳೆದಿದೆ. ಇದು ನಮಗೆ ಹೆಮ್ಮ ತರುವ ವಿಷಯ ಎಂದು ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಆಲಿ ಮಂಚಿ ನೂಜಿ ಅಂಗನವಾಡಿಯಲ್ಲಿ ನಡೆದ ಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಿ  ಹೇಳಿದರು.
IMG-20191207-WA0026ಹಿರಿಯರಾದ ಗೋವಿಂದ ನಾಯಕ್, ಗ್ರಾ. ಪಂ. ಉಪಾಧ್ಯಕ್ಷರಾದ ಮೋಹನ್ ದಾಸ್ ಶೆಟ್ಟಿ, ಆಶಾ ಕಾರ್ಯಕರ್ತೆ ಗೀತಾ, ಮಹಮ್ಮದ್ ಅಬೂಬಕ್ಕರ್‍, ಅಬ್ದುಲ್ ಉಪಸ್ಥಿತರಿದ್ದರು. ಬಾಲವಿಕಾಸ ಸಮಿತಿ ಆಧ್ಯಕ್ಷರಾದ ಪ್ರಮೀಳಾ ಕಾರ್ಯಕ್ರಮ ನಿರೂಪಿಸಿದರು. ಮೇಲ್ವಿಚಾರಕಿ ಗುಣವತಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

By suddi9

Leave a Reply

Your email address will not be published. Required fields are marked *