ಹೈದರಾಬಾದ್: ದೇಶದಾದ್ಯಂತ ತೀವ್ರ ಸಂಚಲನವನ್ನು ಸೃಷ್ಟಿಸಿದ್ದ ಪ್ರಕರಣದಲ್ಲಿ ಶುಕ್ರವಾರ ನಡೆದ ಮಹತ್ವದ ಬೆಳವಣಿಗೆಯಲ್ಲಿ ಕರ್ನಾಟಕದ ಹುಬ್ಬಳ್ಳಿ ಮೂಲದ ಪೊಲೀಸ್ ಆಯುಕ್ತ ವಿಶ್ವನಾಥ ಸಜ್ಜನರ ನೇತೃತ್ವದಲ್ಲಿ ಪಶುವೈದ್ಯೆ ಕೊಲೆ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ.
ದಿಶಾ ಕೊಲೆ ನಡೆದ ಸ್ಥಳವನ್ನು ಸೀನ್ ರೀಕನ್ಸ್ಟ್ರಕ್ಷನ್ ಮಾಡುತ್ತಿರುವಾಗ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ನಾಲ್ವರು ಆರೋಪಿಗಳಾದ ಮೊಹಮ್ಮದ್ ಆರಿಫ್, ಜೊಲ್ಲು ನವೀನ್, ಶಿವ ಮತ್ತು ಚೆನ್ನಕೇಶವ ಅವರನ್ನು ಗುಂಡು ಹಾರಿಸಿ ಎನ್ ಕೌಂಟರ್ ಮಾಡಿದ್ದಾರೆ.
ಹೈದರಾಬಾದ್ ನ ಶಾದ್ ನಗರದ ಚಟಾನ್ ಪಲ್ಲಿ ಬ್ರಿಡ್ಜ್ ಬಳಿ ಸ್ಥಳ ಪರಿಶೀಲನೆಗೆ ಕರೆದುಕೊಂಡು ಹೋಗಿದ್ದ ವೇಳೆ ಆರೋಪಿಗಳು ಪರಾರಿಯಾಗಲು ಯತ್ನಸಿದ್ದರು. ಈ ವೇಳೆ ಆರೋಪಿಗಳಾದ ಆರೀಫ್, ಚನ್ನಕೇಶವಲು, ನವೀನ್, ಶಿವು ಮೇಲೆ ವಿಶ್ವನಾಥ್ ಸಜ್ಜನರ್ ತಂಡದಿಂದ ಎನ್ ಕೌಂಟರ್ ನಡೆಸಲಾಗಿದೆ.
*ವೀರಕನ್ನಡಿಗ’ ವಿಶ್ವನಾಥ್ ಸಜ್ಜನವರ್
ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಆರೋಪಿಗಳ ಮೇಲೆ ಕನ್ನಡಿಗ ವಿಶ್ವನಾಥ್ ಸಜ್ಜನರ್ ನೇತೃತ್ವದ ತಂಡದಿಂದ ಎನ್ ಕೌಂಟರ್ ಮಾಡಲಾಗಿದೆ.
ವಿಶ್ವನಾಥ್ ಸಜ್ಜನರ್ ಅವರು ಕರ್ನಾಟಕದ ಹುಬ್ಬಳ್ಳಿ ಮೂಲದವರಾಗಿದ್ದು, ಸೈಬರಬಾದ್ ಪೊಲೀಸ್ ಆಯುಕ್ತರಾಗಿದ್ದು, ಇಂದು ಮುಂಜಾನೆ 3.30 ರ ಸುಮಾರಿಗೆ ನಡೆದ ಪಶುವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಆರೋಪಿಗಳ ಮೇಲೆ ಎನ್ ಕೌಂಟರ್ ನಡೆಸಿದ್ದಾರೆ.
*ವಿಶ್ವನಾಥ್ ಸಜ್ಜನರ್ ನೇತೃತ್ವದ ಪೊಲೀಸ್ ಕಮಿಷನರ್ ತಂಡದ ಕಾರ್ಯಾಚರಣೆ.
* ವಿಶ್ವನಾಥ್ ಸಜ್ಜನರ್ ಹುಬ್ಬಳ್ಳಿ ಮೂಲದವರು
* ಆರೋಪಿಗಳ ಮೇಲೆ ಗುಂಡು ಹಾರಿಸಿದ ಪೊಲೀಸರು
* ಬೆಳಗ್ಗೆ 3.30ಕ್ಕೆ ನಡೆದ ಘಟನೆ



