ಬಂಟ್ವಾಳ: ಭಾರತದ ಭವಿಷ್ಯ ಮಕ್ಕಳ ಬೆಳವಣಿಗೆಯಲ್ಲಿ ಅಡಗಿದೆ. ಮಕ್ಕಳು ಸುಸಂಸ್ಕ್ರತರಾಗಿ ಬೆಳೆದಾಗ ಅವರು ಬಹುದೊಡ್ಡ ಮಾನವ ಸಂಪನ್ಮೂಲರಾಗುತ್ತದೆ ಎಂದು ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಆಲಿ ನುಡಿದರು.
IMG-20191204-WA0051
ಅವರು ಮಂಚಿ ಕಜೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಮಕ್ಕಳ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಸುಮಿತ್ರ ವಹಿಸಿದ್ದರು. ಶಾಲಾ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಅಬೂಬಕ್ಕರ್ ನಿರ್ಬೈಲ್, ಜಯಪ್ರಕಾಶ್ ರೈ ಮೇರಾವು, ಉಪಾಧ್ಯಕ್ಷರಾದ ಸುನಂದ, ನಿವೃತ್ತ ಶಿಕ್ಷಕಿ ವಾರಿಜ ಟೀಚರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪುರುಷೋತ್ತಮ ಪೂಜಾರಿ ಪಡೀಲ್, ಮುಖ್ಯೋಪಾಧ್ಯಾಯರಾದ ಜೆಸಿಂತ ಡಿಸಿಲ್ವ, ಶಿಕ್ಷಕ ಮಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *