ಬಂಟ್ವಾಳ:ಗ್ರಾಮಾಂತರಠಾಣೆಯಸಿದ್ಧಕಟ್ಟೆಕರ್ಪೆಮುಗೇರುಎಂಬಲ್ಲಿಗುರುವಾರಬೆಳಗ್ಗವವಾಹಿತೆಯೋರ್ವರುಬಾವಿಗಹಾರಿಆತ್ಮಹತ್ಯಮಾಡಿಕೊಂಡಿದ್ದಾರೆ.ಮುಗೇರು ನಿವಾಸಿ ಅಭಯ್ ಜೈನ್ ಅವರ ಪತ್ನಿ ಪ್ರತಿಭಾ (35) ಸಾವನ್ನಪ್ಪಿದವರು. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಲ್ಲಿ ಮೃತ ಮಹಿಳೆಯ ತಂದೆ ದೂರಿನಂತೆ ಮಾವನ ವಿರುದ್ಧ ಐಪಿಸಿ ಸೆ.306ರನ್ವಯ ಪ್ರಕರಣ ದಾಖಲಾಗಿದೆಮುಗೇರುವಿನ ಭುಜಬಲಿ ಅವರ ಪುತ್ರ ಅಭಯಕುಮಾರ್ ಜೈನ್ ಅವರೊಂದಿಗೆ ಪ್ರತಿಭಾ 13 ವರ್ಷಗಳ ಹಿಂದೆ ವಿವಾಹವಾಗಿದ್ದರು.
ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮನೆಯಲ್ಲಿ ಅವರ ಪತಿಯ ತಮ್ಮ, ತಮ್ಮನ ಪತ್ನಿಯೂ ಇದ್ದರು. ಎಂದಿನಂತೆ ಗುರುವಾರ ಬೆಳಗ್ಗೆ ಎದ್ದ ಪ್ರತಿಭಾ ಅವರ ಶವ ಬೆಳಗ್ಗೆ ಸುಮಾರು 6.30ರ ವೇಳೆಗೆ ಮನೆ ಸಮೀಪದ ಬಾವಿಯಲ್ಲಿ ಕಂಡುಬಂದಿತ್ತು. ಈ ಕುರಿತು ಬಂಟ್ವಾಳ ಪೊಲೀಸರಿಗೆ ದೂರು ನೀಡಿರುವ ಪ್ರತಿಭಾ ತಂದೆ ಜಿನರಾಜ್, ಸಾವಿಗೆ ಆಕೆಯ ಮಾವ ಪ್ರೇರಣೆ ಎಂದು ತಿಳಿಸಿದ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಮಾವನ ವಿರುದ್ಧ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್ ಗ್ರಾಮಾಂತರ ಪೋಲೀಸ್ ಠಾಣೆಯ ಎಸ್.ಐ.ಪ್ರಸನ್ನ ಹಾಗೂ ಸಿಬ್ಬಂದಿ ಗಳು ಬೇಟಿ ನೀಡಿ ತನಿಖೆ ನಡೆಸಿದರು.
