ಸರಕು ಸಾಗಾಟ ಲಾರಿ ಕಳವಿಗೆ ಯತ್ನ ಬಂಧನ
ಸುದ್ದಿ9 ಮಂಗಳೂರು:ಸುರತ್ಕಲ್-ಕಾನ ಬಳಿ ನಿಲ್ಲಿಸಿದ್ದ ಸರಕು ಸಾಗಾಟ ಲಾರಿಯನ್ನು ಕಳವು ಮಾಡಿದ ಆರೋಪಿ ಚೊಕ್ಕಬೆಟ್ಟು ನಿವಾಸಿ ಅಬೂಬಕ್ಕರ್(26), ಮಹಮ್ಮದ್ ನವಾಜ್(21)ಎಂಬವರನ್ನು ಸುರತ್ಕಲ್ ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಇವರು ತನ್ನ 6ಜನ ಸ್ನೇಹಿತರೊಂದಿಗೆ ಸೇರಿ ಲಾರಿಯನ್ನು ಕದ್ದು ಅದನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಬಿಡಿಭಾಗಗಳನ್ನಾಗಿಸಿ ಮಾರಾಟ ಮಾಡಿದ್ದರು.ಈ ಪ್ರಕರಣಕ್ಕೆ ಸಂಬಂದಿಸಿ ಕೆಲವು ಜನ ಆರೋಪಿಗಳನ್ನು ಬಂದಿಸಲು ಬಾಕಿಯಿದೆ. ಎಂದು ಸುರತ್ಕಲ್ ಪೋಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ. ಆರೋಪಿಗಳಿಂದ ಲಾರಿಗೆ ಸಂಬಂದಿಸಿ ನಗದು 2.5ಲಕ್ಷ ರೂಪಾಯಿಯನ್ನು ಪೋಲೀಸರು ಆರೋಪಿಗಳಿಂದ ವಶಪಡಿಸಿಕೊಂಡು ಅದನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *