ಪಡುಬಿದ್ರಿ: ಅತೀವೇಗ ಹಾಗೂ ಅಜಾಗರೂಕತೆಯಿಂದ ಸಂಚರಿಸಿದ ಲಾರಿಯೊಂದು ಬೈಕ್ ಸವಾರನನ್ನು ಬಲಿ ಪಡೆದ ಘಟನೆ ಸೆ. 30ರಂದು ಮಂಗಳವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಇಲ್ಲಿನ ಕಾರ್ಕಳ ರಾಜ್ಯಹೆದ್ದಾರಿಯಲ್ಲಿ ಸಂಭವಿಸಿದೆ.
IMG-20140930-WA0050

IMG-20140930-WA0047

IMG-20140930-WA0048

IMG-20140930-WA0049

ಮೃತರನ್ನು ಬೆಳ್ತಂಗಡಿ ಮೂಲದವರೆಂದು ಹೇಳಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಲಾರಿಯಡಿ ಸಿಲುಕಿ ತಲೆಯೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪಡುಬಿದ್ರಿ ಠಾಣಾ ಪೊಲೀಸರು ಭೇಟಿ ಕೊಟ್ಟು ಮೃತದೇಹವನ್ನು ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ.

ಕೆ.ಎ.20 ಕ್ಯೂ.1538 ನಂಬ್ರದ ಹೀರೋ ಸ್ಪ್ಲೆಂಡರ್ ಬೈಕ್ನಲ್ಲಿ ಸಂಚರಿಸುತ್ತಿದ್ದ ಸಂದರ್ಭ ಲಾರಿ ವಿರುದ್ಧ ದಿಕ್ಕಿನಲ್ಲಿ ಸಾಗಿಬಂದಿದ್ದು ಏಕಾಏಕಿ ಬೈಕನ್ನು ಕೆಡವಿ ಚಕ್ರದಡಿಗೆ ಹಾಕಿಕೊಂಡಿದೆ ಎಂದು ಪ್ರತ್ಯಕ್ಷದಶರ್ಿಗಳು ತಿಳಿಸಿದ್ದಾರೆ. ಲಾರಿ ಚಾಲಕನನ್ನು ಪಡುಬಿದ್ರಿ ಠಾಣಾ ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.
ಮೃತನನ್ನು ಬೆಲ್ತಂಗಡಿ ಮೂಲದವನೆಂದು ತಿಳಿದು ಬಂದಿದೆ. ಅಪಘಾತದ ತೀವ್ರತೆ ಎಷ್ಟಿತೆಂದರೆ ಬೈಕ್ ಸವಾರ ಲಾರಿಯ ಅಡಿಗೆ ಬಿದ್ದು ತಲೆ ಸಂಪೂರ್ಣ ಜಖಂ ಗೊಂಡಿದೆ. ಸವಾರ ಸ್ಥಳದಲ್ಲೇ ಮೃತಪಟ್ಟಇದ್ದಾನೆ .

By suddi9

Leave a Reply

Your email address will not be published. Required fields are marked *