ಸಾಲೆತ್ತೂರು : ಸಾಲೆತ್ತೂರು ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿನೂತನವಾಗಿ ದೀಪ ಬೆಳಗಿ ಹಣತೆಗಳನ್ನು ಹಚ್ಚುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ವಿ.ವಿಯ ಸಂಶೋಧನ ವಿದ್ಯಾರ್ಥಿ ಶ್ರೀಮತಿ ಮೈತ್ರಿ ಭಟ್ ಕನ್ನಡ ಹಾಗೂ ಕರುನಾಡಿನ ಬಗೆಗೆ ಅನೇಕ ವಿಚಾರಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

salethur(2)

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಸಹ ಶಿಕ್ಷಕರಾದ ವಿನಾಯಕ್ ಕಾಮತ್ ಅವರು ತಮ್ಮ ಶಾಲೆಗೆ ಬರುತ್ತಿರುವ ಗಡಿನಾಡಿನ ಮಕ್ಕಳು ಹಾಗೂ ಹೆತ್ತವರ ಬಗ್ಗೆ ಅಭಿಮಾನವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ನಾಡು-ನುಡಿಯ ಕುರಿತಾದ ಭಾಷಣ, ಹಾಡು ಪ್ರಸ್ತುತಪಡಿಸಿದರು. ಸಹ ಶಿಕ್ಷಕಿ ಶಶಿಕಲಾ ಎಂ. ಎಸ್ಮ ಕರ‍್ಯಕ್ರಮವನ್ನು ನಿರೂಪಿಸಿದರು. ದೈಹಿಕ ಶಿಕ್ಷಕರಾದ ರಾಘವೇಂದ್ರ ಹಾಗೂ ಪ್ರಶಿಕ್ಷಕರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *