ಬಂಟ್ವಾಳ : ಹಿರಿಯರು ಶ್ರದ್ದೆಯಿಂದ ಕಟ್ಟಿರುವ ಸಂಘವನ್ನು ಉಳಿಸಿ, ಬೆಳಸಿಕೊಳ್ಳುವ ಮಹತ್ತರ ಜವಾಬ್ದಾರಿ ನಮ್ಮದಾಗಿದೆ ಎಂದು ಸಮಾಜ ಸೇವಾ ಸಹಕಾರಿ ಬ್ಯಾಂಕಿನ ಮಹಾ ಪ್ರಬಂಧಕರಾದ ಭೋಜ ಮೂಲ್ಯ ಹೇಳಿದರು. ಬಂಟ್ವಾಳ ತಾ.ನ ವಗ್ಗ ಕುಲಾಲ ಸಂಘದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ 15ನೇ ವಾರ್ಷಿಕ ಮಹಾಸಭೆಯಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಸಂಘದ ಅದ್ಯಕ್ಷ ಜಯರಾಮ ಕುಲಾಲ ಉರುಡಾಯಿ.ತಾಲೂಕು ಸಂಘದ ಯುವವೇದಿಕೇ ಅದ್ಯಕ್ಷ ಸುಕುಮಾರ ಬಂಟ್ವಾಳ ಉದ್ಯಮಿ ಬೂಬ ಸಾಲ್ಯಾನ್ ವೇದಿಕೆಯಲ್ಲಿದ್ದರು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಾಗೆಯೇ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ಹರೀಶ ಜಾರ್ಬೇಟ್ಟು ಪ್ರಾಸ್ಠವಿಕ ಭಾಷಣಗೈದರು. ಯಶೋಧಾ ಜೇ ಬಂಗೇರ ಸ್ವಾಗತಿಸಿದರು. ಕಾರ್ಯದರ್ಶಿ ಹರೀಶ ಕಾಡಬೆಟ್ಟು ವರದಿ ವಾಚಿಸಿದರು.ರೋಹಿತ್ ಅಗರ್ಡಬೈಲ ವಂದಿಸಿದರು. ಕಲಾಕೃತಿ ,ಬೆಂಕಿ ಇಲ್ಲದೇ ಅಡುಗೆ, ರಂಗೋಲಿ, ಸೂಜಿಗೆ ದಾರ ಹಾಕುವುದು, ಲಿಂಬೇ ಚಮಚ ಹಾಗೂ ಸಂಗೀತ ಕುರ್ಚಿ ಸ್ಪರ್ಧೆ ಆಯೋಜಿಸಲಾಗಿತು. ಮಕ್ಕಳಿಗೆ ಡ್ರಾಯಿಂಗ್ ಮತ್ತು ರಸಪ್ರಶ್ನೆ ಕಾರ್ಯಕ್ರಮ ನಡೆಯಿತು.ವನಿತಾ ಉಗ್ಗಬೆಟ್ಟು ಕಾರ್ಯಕ್ರಮ ನಿರೂಪಿಸಿದರು.