ಮಂಗಳೂರು : ಸ್ವಚ್ಚ, ಪ್ರಾಮಾಣಿಕ ಹಾಗು ಜನಪರ ರಾಜಕಾರಣಕ್ಕಾಗಿ ಸ್ಥಾಪಿಸಲ್ಪಟ್ಟಿರುವ “ಕರ್ನಾಟಕ ರಾಷ್ಟ್ರ ಸಮಿತಿ” ಪಕ್ಷವು ಚುನಾವಣಾ ಆಯೋಗದೊಂದಿಗೆ ನೊಂದಣಿಯಾಗಿದ್ದು, ಆಗಸ್ಟ್ 10, 2019ರಂದು ಬೆಂಗಳೂರಿನಲ್ಲಿ ಪಕ್ಷವನ್ನು ಉದ್ಘಾಟಿಸಲಾಯಿತು. ಎಲ್ಲರಿಗೂ ತಿಳಿದಿರುವಂತೆ ರಾಜ್ಯದಲ್ಲಿ ರಾಜಕೀಯ ಪರಿಸ್ಥಿತಿಯು ಹದಗೆಟ್ಟಿದ್ದು, ಮಿತಿಮೀರಿದ ಭ್ರಷ್ಟಾಚಾರ, ಆಪರೇಷನ್ ಕಮಲ, ದುರಾಡಳಿತ ಸರ್ವೇಸಾಮಾನ್ಯವಾಗಿದೆ. ಒಂದು ಕಡೆ ರಾಜ್ಯವು ನೆರೆ ಮತ್ತು ಬರದಿಂದ ತತ್ತರಿಸುತ್ತಿದ್ದರೆ, ಅಧಿಕಾರಕ್ಕಾಗಿ ಜನಪ್ರತಿನಿಧಿಗಳು ಕಿತ್ತಾಡುತ್ತಿದ್ದಾರೆ. ಕರ್ನಾಟಕ ಮತ್ತು ಕನ್ನಡಿಗರ ಆತ್ಮಗೌರವ ಹಾಗು ಅಸ್ಮಿತೆಗೆ ಧಕ್ಕೆತರುತ್ತಿದ್ದಾರೆ.
ಕರ್ನಾಟಕ, ಕನ್ನಡ ಮತ್ತು ನಾಡಿನ ಜನ, ನೆಲ, ಜಲದ ರಕ್ಷಣೆ, ಹಾಗೂ ಭ್ರಷ್ಟಾಚಾರ ನಿರ್ಮೂಲನೆ ನಮ್ಮ ಪಕ್ಷದ ಪ್ರಮುಖ ಧ್ಯೇಯವಾಗಿದ್ದು, ಇದಕ್ಕಾಗಿ ಮುಂಬರುವ ದಿನಗಳಲ್ಲಿ ಪಕ್ಷವು ಅನೇಕ ಹೋರಾಟ ಮತ್ತು ರಚನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದೆ. ಸ್ಥಾಪನೆಯಾದ ಕೆಲವೇ ತಿಂಗಳುಗಳಲ್ಲಿ ಹಲವಾರು ಹೋರಾಟಗಳನ್ನು ತೆಗೆದುಕೊಂಡಿದೆ. ಈ ನಿಟ್ಟಿನಲ್ಲಿ ಮಾಜಿ ಮಂತ್ರಿ ಕೆ.ಜೆ.ಜಾರ್ಜ್ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿರುವುದು ಪ್ರಮುಖವಾದದ್ದು.
ರಾಜ್ಯ ಸರ್ಕಾರದ ವಿವೇಚನಾರಹಿತ ನಡೆಯಿಂದ ಸಂವಿಧಾನಬದ್ಧವಾಗಿ ಮಂಗಳೂರು ಮಹಾನಗರ ಪಾಲಿಕೆಯೂ ಸೇರಿದಂತೆ ಹಲವು ನಗರ ಸ್ಥಳೀಯ ಸಂಸ್ಥೆಗಳಿಗೆ ಸುಮಾರು ಹತ್ತು ತಿಂಗಳ ಹಿಂದೆಯೇ ಚುನಾವಣೆಗಳು ನಡೆಯಬೇಕಿತ್ತು. ವಾರ್ಡ್‌ಗಳ ಮೀಸಲಾತಿ ಪಟ್ಟಿಯನ್ನು ತಮಗೆ ಅನುಕೂಲವಾಗುವ ಹಾಗೆ ಆಡಳಿತಾರೂಢ ಪಕ್ಷಗಳು ನಿರ್ಧರಿಸುವುದು ಇಂತಹ ಕೆಟ್ಟ ಅಪ್ರಜಾಸತ್ತಾತ್ಮಕ ಪರಿಸ್ಥಿತಿಗೆ ಕಾರಣವಾಗಿದೆ. ಇತ್ತೀಚಿಗೆ ತಾನೆ ರಾಜ್ಯ ಚುನಾವಣಾ ಆಯೋಗವು ಮಂಗಳೂರು ಮಹಾನಗರ ಪಾಲಿಕೆಯೂ ಸೇರಿದಂತೆ 14 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಯನ್ನು ಘೋಷಿಸಿದ್ದು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಇಲ್ಲೆಲ್ಲಾ ಸ್ಪರ್ಧಿಸುತ್ತಿದ್ದು, ಇಂದು ಮತ್ತು ನಾಳೆ ನಮ್ಮ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಗೆ ಈ ಕೆಳಕಂಡ ವಾರ್ಡ್‌ಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದ್ದು, ಮಿಕ್ಕ ವಾರ್ಡ್‌ಗಳ ಅಭ್ಯರ್ಥಿಗಳನ್ನು ನಾಳೆ ಅಂತಿಮಗೊಳಿಸಲಾಗುತ್ತದೆ:
ವಾರ್ಡ್ 3 (ಕಾಟಿಪಳ್ಳ ಪೂರ್ವ) – ಕಬೀರ್ ಕಾಟಿಪಳ್ಳ
ವಾರ್ಡ್ 4 (ಕಾಟಿಪಳ್ಳ ಕೃಷ್ಣಾಪುರ) – ಶಾಂತಿ ನಾಗರಾಜ್
ವಾರ್ಡ್ 13( ಕುಂಜತ್ತಬೈಲ್ ಉತ್ತರ) – ಅವಿಲ್ ಆರ್ ಡಿಸೋಜ
ವಾರ್ಡ್ 22 (ಕದ್ರಿ ಪದವು) – ಅವಿನಾಶ್ ಡಿಸೋಜ
ವಾರ್ಡ್ 24 (ದೇರೆಬೈಲ್ ದಕ್ಷಿಣ) – ಹ್ಯಾರಿ ಪ್ರವೀಣ್
ವಾರ್ಡ್ 26 (ದೇರೆಬೈಲ್ ಪಶ್ಚಿಮ) – ಉಷಾ ಶೆಟ್ಟಿ
ವಾರ್ಡ್ 31 (ಬಿಜೈ) – ವಿನ್ಸೆಂಟ್ ಡಿಕೋಸ್ತ
ವಾರ್ಡ್ 33 (ಕದ್ರಿ ದಕ್ಷಿಣ) – ಶನಾನ್ ಪಿಂಟೊ
ವಾರ್ಡ್ 36 (ಪದವು ಪೂರ್ವ) – ಕ್ಲಾರಾ ಸಲ್ದಾನ
ವಾರ್ಡ್ 43 (ಕುದ್ರೋಳಿ) – ದೇವಿಪ್ರಸಾದ್ ಬಜಿಲಕೇರಿ
ರಾಜ್ಯದ ಶ್ರೀಮಂತ ಮಹಾನಗರ ಪಾಲಿಕೆಗಳಲ್ಲಿ ಒಂದಾದ ಮಂಗಳೂರು ಮಹಾನಗರ ಪಾಲಿಕೆಯು ರಾಜ್ಯದ ಇತರ ಮಹಾನಗರ ಪಾಲಿಕೆಗಳಂತೆಯೇ ಅವ್ಯವಸ್ಥೆಗೆ, ಭ್ರಷ್ಟಚಾರಕ್ಕೆ, ಹಾಗೂ ಜನಪರವಲ್ಲದ ನೀತಿಗಳಿಗೆ ಕುಖ್ಯಾತಿ ಪಡೆದಿದೆ. ರಾಜ್ಯದ ಬೇರೆಡೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರನ್ನು ಮತ್ತು ಮಧ್ಯಮವರ್ಗದವರನ್ನು ಹೊಂದಿರುವ ಮಂಗಳೂರು ನಗರದ ಜನತೆಯನ್ನು ಎಅಃ ಪಕ್ಷಗಳು ಎಂದೇ ನಮ್ಮ ರಾಜ್ಯದಲ್ಲಿ ಕೆಟ್ಟ ಹೆಸರು ಪಡೆದಿರುವ ಮೂರೂ ಪ್ರಮುಖ ಪಕ್ಷಗಳು ತಮ್ಮ ಎಂದಿನ ಜನವಿರೋಧಿ ನೀತಿ ಮತ್ತು ನಡವಳಿಕೆಗಳಿಂದ ಮೋಸ ಮಾಡುತ್ತಲೇ ಬರುತ್ತಿರುವುದು ಇಂತಹ ದುರದೃಷ್ಟಕರ ಸ್ಥಿತಿಗೆ ಕಾರಣವಾಗಿದೆ. ಹಾಗಾಗಿ, ಈ ಭ್ರಷ್ಟ ಪಕ್ಷಗಳನ್ನು ಬದಿಗೆ ಸರಿಸಿ, ತಮ್ಮ ತಮ್ಮ ವಾರ್ಡ್‌ಗಳಲ್ಲಿ ಉತ್ತಮ ಮತ್ತು ಯೋಗ್ಯ ವ್ಯಕ್ತಿಗಳನ್ನು ತಮ್ಮ ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡುವ ಗುರುತರ ಜವಾಬ್ದಾರಿ ಈ ಸಂದರ್ಭದಲ್ಲಿ ಮಂಗಳೂರಿನ ಪ್ರಜ್ಜಾವಂತ ಜನತೆಯ ಮೇಲಿದೆ.
ಮಹಾನಗರ ಪಾಲಿಕೆ ಆಡಳಿತದಲ್ಲಿ ಸಂಪೂರ್ಣ ಪಾರದರ್ಶಕತೆ, ಭ್ರಷ್ಟಾಚಾರಕ್ಕೆ ಕಡಿವಾಣ, ಆಧುನಿಕ ತಂತ್ರಜ್ಜಾನ ಬಳಸಿ ನಾಗರಿಕರಿಗೆ ತ್ವರಿತ ಸೇವೆ, ಸ್ಮಾರ್ಟ್ ಸಿಟಿ ಯೋಜನೆಗಳ ಅನುಷ್ಠಾನ, ಸೋರಿಕೆ ಇಲ್ಲದ ತೆರಿಗೆ ಸಂಗ್ರಹ, ನಿರಂತರ ಕುಡಿಯುವ ನೀರು ಪೂರೈಕೆ, ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ವೈಜ್ಜಾನಿಕ ಕಸ ವಿಲೇವಾರಿ, ವಾರ್ಡ್ ಸಮಿತಿಗಳ ರಚನೆ, ಮೂಲಭೂತ ಸೌಕರ್ಯಗಳ ಕಾಮಗಾರಿಗಳನ್ನು ಸಮಯಮಿತಿಯಲ್ಲಿ ಪೂರ್ಣ ಮಾಡುವುದೂ ಸೇರಿದಂತೆ ಹಲವು ಅಂಶಗಳನ್ನು ನಮ್ಮ ಪಕ್ಷವು ಈ ಸಂದರ್ಭದಲ್ಲಿ ಜನರ ಮುಂದೆ ಇಡುತ್ತಿದೆ. ಹಾಗೆಯೇ, ಈ ಚುನಾವಣೆಯಲ್ಲಿ ನಮ್ಮ ಪಕ್ಷದ ಯಾವುದೇ ಅಭ್ಯರ್ಥಿಗಳು ಹಣ-ಹೆಂಡ-ವಸ್ತುಗಳನ್ನು ಹಂಚಿ ಮತದಾರರಿಗೆ ಆಮಿಷ ಒಡ್ಡಿ ಮತ ಕೇಳುವುದೂ ಸೇರಿದಂತೆ ಯಾವುದೇ ಚುನಾವಣಾ ಅಕ್ರಮ ಮತ್ತು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಆಶ್ವಾಸನೆ ನೀಡುತ್ತಿದ್ದೇವೆ.
ಸ್ವಚ್ಚ, ಪ್ರಾಮಾಣಿಕ, ಜನಪರ ರಾಜಕಾರಣವು ಕರ್ನಾಟಕಕ್ಕೆ ಇಂದು ಅಗತ್ಯವಷ್ಟೇ ಅಲ್ಲದೆ ಅನಿವಾರ್ಯವೂ ಆಗಿದೆ. ಮಂಗಳೂರಿನ ಸುಶಿಕ್ಷಿತ ಮತ್ತು ದೇಶಪ್ರೇಮಿ ಮತದಾರರು ಅದನ್ನು ಮನಗಂಡು ಈ ಚುನಾವಣೆಯಲ್ಲಿ ’ಕರ್ನಾಟಕ ರಾಷ್ಟ ಸಮಿತಿ’ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಬೇಕೆಂದು ಈ ಮೂಲಕ ವಿನಂತಿಸಲಾಗುತ್ತಿದೆ.
ರವಿ ಕೃಷ್ಣಾರೆಡ್ಡಿ ಅಲೆಕ್ಸಾಂಡರ್ ಡಿಸೋಜ
ರಾಜ್ಯಾಧ್ಯಕ್ಷರು ದ.ಕ. ಜಿಲ್ಲಾಧ್ಯಕ್ಷರು
ರಘುಪತಿ ಭಟ್, ದೇವಿಪ್ರಸಾದ್ ಬಜಿಲಕೇರಿ
ರಾಜ್ಯ ಜಂಟಿ ಕಾರ್ಯದರ್ಶಿ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ
