ಕೈಕಂಬ: ಗಂಜಿಮಠದ ಆಯುರ್‍ಸ್ಪರ್ಶ ಡಯಾಬಿಟಿಕ್ ಇನ್ನೋವೇಟಿವ್ ಫೌಂಡೇಶನ್(ರಿ), ಆಯುರ್‍ಸ್ಪರ್ಶ ಆಯುರ್ವೇದ ಆಸ್ಪತ್ರೆ, ಮಂಗಳೂರು ಕೆಎಂಸಿ ಆಸ್ಪತ್ರೆ ಹಾಗೂ ಗಂಜಿಮಠದ ರಾಜ್ ಅಕಾಡೆಮಿ ಜಂಟಿ ಆಶ್ರಯದಲ್ಲಿ ನವಂಬರ್ 8ರಂದು ಮಧುಮೇಹ ಜಾಗೃತಿ ಮಾಸದಂಗವಾಗಿ ಆಯುರ್‍ಸ್ಪರ್ಶ ಮಧುಮೇಹ ಮುಕ್ತ ಭಾರತ ಜನಜಾಗೃತಿ ಅಭಿಯಾನ ಜರುಗಲಿದೆ.

ಗಂಜಿಮಠ ರಾಜ್ ಅಕಾಡೆಮಿ ಶಾಲೆಯಲ್ಲಿ ಬೆಳಿಗ್ಗೆ 9-12:30ರವರೆಗೆ ಈ ಕಾರ್ಯಕ್ರಮ ಜರುಗಲಿದೆ. ಈ ಸಂದರ್ಭದಲ್ಲಿ ಮಧುಮೇಹ ಮತ್ತು ಹೃದಯ ತಪಾಸಣಾ ಉಚಿತ ಶಿಬಿರ(ಕೆಎಂಸಿ ವೈದ್ಯರು), ಅಕಾಡೆಮಿ ವಿದ್ಯಾರ್ಥಿಗಳಿಂದ ಮಧುಮೇಹ ಜಾಗೃತಿಯ ಕಿರು ನಾಟಕ, ಮಧುಮೇಹ ಜಾಗೃತಿಯ ಚಿತ್ರಕಲಾ ಪ್ರದರ್ಶನ ಮತ್ತು ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಮಧುಮೇಹದ ಕುರಿತು ವೈದ್ಯರೊಂದಿಗೆ ನೇರ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಶಾಸಕ ಡಾ. ಭರತ್ ಶೆಟ್ಟಿ ಶಿಬಿರ ಉದ್ಘಾಟಿಸಲಿದ್ದಾರೆ. ರಾಜ್ ಅಕಾಡೆಮಿ ಅಧ್ಯಕ್ಷ ಯತಿರಾಜ ಶೆಟ್ಟಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ಯು ಟಿ ಖಾದರ್, ಶಾಸಕ ರಾಜೇಶ್ ನಾೈಕ್, ಗಣೇಶ್ ಪೂಜಾರಿ, ಪ್ರವೀಣ ಶೆಟ್ಟಿ ಮಮತಾ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ. ಕೆ ಎಂಸಿಯ ಡಾ. ಶ್ರೀನಾಥ ಶೆಟ್ಟಿ ಮಧುಮೇಹದ ಕುರಿತು ಮಾಹಿತಿ ನೀಡಿದರೆ, ಡಾ. ವಿಷು ಕುಮಾರ್ ಮಧುಮೇಹಗಳಲ್ಲಿ ಹೃದ್ರೋಗದ ಕುರಿತು ಮಾಹಿತಿ ನೀಡಲಿದ್ದಾರೆ. ಮಧುಮೇಹ ನಿಯಂತ್ರಣದಲ್ಲಿ ಆಯುರ್ವೇದದ ಪಾತ್ರದ ಕುರಿತು ಆಯುರ್ ಸ್ಪರ್ಶ ಡಯಾಬಿಟಿಕ್ ಇನ್ನೋವೇಟಿವ್ ಫೌಂಡೇಶನ್ ಅಧ್ಯಕ್ಷ ಡಾ. ಸತೀಶ್ ಶಂಕರ್ ಬಿ ಮಾತನಾಡಲಿದ್ದಾರೆ. ಡಾ. ಸತೀಶ್ ಶಂಕರ್, ಡಾ. ಶ್ರೀ ಕುಮಾರ್, ಡಾ. ಶ್ರೀನಾಥ್ ಶೆಟ್ಟಿ ಹಾಗೂ ಡಾ, ಕೆ ವಿ ಸುರೇಶ್ ಕುಮಾರ್ ಜೊತೆ ಸಂವಾದ ನಡೆಯಲಿದೆ.

ಉಚಿತ ತಪಾಸಣೆ :

ಮಧುಮೇಹ ರಕ್ತ ಪರೀಕ್ಷೆ, ಇಸಿಜಿ, ಹೃದಯ ತಪಾಸಣೆ, ಮಧುಮೇಹಿಗಳಿಗೆ ಉಚಿತ ಔಷಧಿ ವಿತರಿಸಲಾಗುವುದೆಮದು ಆಯುರ್ ಸ್ಪರ್ಶದ ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *