ಮಂಗಳೂರು:ತಲಪಾಡಿ ರೈ ಮಹಲ್‍ನ ಶಾರದ ವಿದ್ಯಾಲಯದ ಪ್ರಾಂಶುಪಾಲೆ ಲತಾಂಜಲಿ ಎಸ್ ರೈ (46) ಅವರು ಇಂದು ಸೋಮವಾರ ಅಲ್ಪ ಕಾಲದ ಅಸೌಖ್ಯದಿಂದ ನಿಧನಹೊಂದಿದರು. ಮೃತರು ಪತಿ ಶ್ಯಾಮ್ ರೈ ಹಾಗೂ ಒರ್ವ ಮಗಳನ್ನು ಅಗಲಿದ್ದಾರೆ. ಬಡಗಬೆಳ್ಳೂರು ನಡ್ಯೋಡಿ ಗುತ್ತು ದಿ.ಸದಾಶಿವ ಮೇಲಾಂಟ ಅವರ ಮಗಳು, ತಲಪಾಡಿ ದೊಡ್ಡಮನೆ ಶ್ಯಾಮ್ ರೈ ಅವರ ಧರ್ಮಪತ್ನಿ.
ಶಾರದ ವಿದ್ಯಾಲಯದಲ್ಲಿ ಅಪಾರ ಪ್ರಮಾಣದ ವಿದ್ಯಾರ್ಥಿ ಸಮೂಹ ಹಾಗೂ ಅಪಾರ ಬಂದುವರ್ಗದವರನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯಲ್ಲಿ ಹಲವಾರು ಗಣ್ಯರು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದ್ದಾರೆ.
