ಬಂಟ್ವಾಳ: ಕಿತ್ತೂರು ರಾಣಿ ಚೆನ್ನಮ್ಮ 18ನೇ ಶತಮಾನದಲ್ಲಿ ತೋರಿಸಿದ ಧೈರ್ಯ, ಸಾಹಸ, ಸತ್ಯದ ಪರವಾದ ಹೋರಾಟ ನಮ್ಮೆಲ್ಲರಿಗೂ ಸ್ಫೂರ್ತಿ  ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಆರ್ ಹೇಳಿದರು.  ಅವರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಬಂಟ್ವಾಳ ಮಿನಿವಿಧಾನ ಸೌಧದ ಸಭಾಂಗಣದಲ್ಲಿ ಬುಧವಾರ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆಯನ್ನು  ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಅಂದು ಯಾವುದೇ ವರ್ಗ ಭೇದಗಳಿಲ್ಲದೆ ಎಲ್ಲರೂ ಒಟ್ಟಾಗಿ ಸತ್ಯದ ಒಳ್ಳೆಯದರ ಉಳಿವಿಗಾಗಿ ಹೋರಾಟ ಮಾಡಿದಲ್ಲಿ ಪ್ರಗತಿ ಪಥದಲ್ಲಿ  ಸಾಗುವುದರಲ್ಲಿ ಸಂದೇಹವಿಲ್ಲ ಎಂದು ಅವರು ಹೇಳಿದರು.3bb5ed3e-aa97-40dc-8869-2fed1326afed

a723ac7e-1246-4cff-a3cb-72b55411a403

d9cce670-0f06-416a-8d66-6a718bfffa3f
ಈ ಸಂದರ್ಭದಲ್ಲಿ ಮಾತನಾಡಿದ ಶಿರಸ್ತೇದಾರ್ ಶ್ರೀಧರ್ ಪುಟ್ಟ ಸಂಸ್ಥಾನದ ರಾಣಿ ಚೆನ್ನಮ್ಮ ಬ್ರಿಟಿಷರು ವಿರುದ್ಧ ಹೋರಾಟ ಮಾಡಿ ಆಧುನಿಕ ಶಸ್ತ್ರಾಸ್ತ್ರ ಹೊಂದಿದ ಬ್ರಿಟಿಷ್ ಸಾಮ್ರಾಜ್ಯವನ್ನು ನಡುಗಿಸಿದ ರೀತಿ ನಿಜಕ್ಕೂ ಅದ್ಭುತ ಎಂದರು.ಈ ಸಂದರ್ಭದಲ್ಲಿ ಕೇಂದ್ರ ಸ್ಥಾನೀಯ ಶಿರಸ್ತೇದಾರ್ ರಾಧಾಕೃಷ್ಣ. ಪಾಣೆಮಂಗಳೂರು ಹೋಬಳಿ ನಾಡಕಚೇರಿ ಉಪತಹಶೀಲ್ದಾರ್ ರೂಪೇಶ್ ಕುಮಾರ್. ಸರ್ವೆಇಲಾಖೆಯ ಸುಪರ್ ವೈಸರ್ ರಮಾದೇವಿ ಪ್ರಭಾರ ಉಪತಹಶೀಲ್ದಾರ್ ಸೀತಾರಾಮ  ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್ ತಾಲೂಕು ಕಚೇರಿ ಸಿಬ್ಬಂದಿಗಳು. ಗ್ರಾಮ ಲೆಕ್ಕಾಧಿಕಾರಿಗಳು. ಗ್ರಾಮ ಸಹಾಯಕರು. ಸಾರ್ವಜನಿಕರು ಈ ಸಂದರ್ಭದಲ್ಲಿ ಹಾಜರಿದ್ದರು. ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ನಿರೂಪಿಸಿ ಪ್ರಥಮ ದರ್ಜೆ ಸಹಾಯಕ ಪ್ರಸನ್ನ ಕುಮಾರ್ ಪಕ್ಕಳ ಸ್ವಾಗತಿಸಿದರು. ಬಂಟ್ವಾಳ ಹೋಬಳಿ ಕಂದಾಯ ನಿರೀಕ್ಷಕ ನವೀನ್ ಬೆಂಜನ ಪದವು ವಂದಿಸಿದರು.
✍ಸದಾ ಬಿ ಸಿ ರೋಡು ..

By suddi9

Leave a Reply

Your email address will not be published. Required fields are marked *