ಕರ್ನಾಟಕದ ಶಾಲಾ ಶಿಕ್ಷಕರೊಬ್ಬರ ಮಗ ಇಂದು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಬೆಳೆದಿದ್ದಾರೆ. ಹಿಂದುಳಿದ ಸಮುದಾಯಕ್ಕೆ ಸೇರಿದ ಹಂದ್ಯಾಲ ಲಕ್ಷ್ಮೀನಾರಾಯಣಸ್ವಾಮಿ ದತ್ತು ಅವರು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಎಚ್ಎಲ್ ದತ್ತು ಅವರ ಸಂಕ್ಷಿಪ್ತ ಪರಿಚಯ ಇಲ್ಲಿದೆ. ಇದುವರೆಗೂ ಕರ್ನಾಟಕದ ಮೂಲದ ಇ.ಎಸ್. ವೆಂಕಟರಾಮಯ್ಯ (1989), ಎಂ.ಎನ್. ವೆಂಕಟಾಚಲಯ್ಯ (1993), ಎಸ್. ರಾಜೇಂದ್ರ ಬಾಬು (2004) ಅವರು ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದ ಎಚ್.ಎಲ್.ದತ್ತು ಅವರು, ಕೇರಳ ಹಾಗೂ ಪಂಜಾಬ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಕಾರ್ಯ ನಿರ್ವಹಿಸಿದ್ದರು. ನ್ಯಾ.ಲೋಧಾ ಅವರ ನೇತೃತ್ವದ ನ್ಯಾಯಾಧೀಶರ ನೇಮಕಾತಿ ಸಮಿತಿ (ಕೊಲಿಜಿಯಂ), ದತ್ತು ಅವರ ಹೆಸರನ್ನು ಶಿಫಾರಸು ಮಾಡಿ ಕೇಂದ್ರ ಸರ್ಕಾರಕ್ಕೆ ಕಡತ ರವಾನಿಸಿತ್ತು. ಎನ್ ಡಿಎ ಸರ್ಕಾರವೂ ಇದನ್ನು ಒಪ್ಪಿ ರಾಷ್ಟ್ರಪತಿಗಳಿಗೆ ರವಾನಿಸಿತ್ತು. ಪ್ರಣಬ್ ಮುಖರ್ಜಿ ಅವರು ಇದಕ್ಕೆ ಅಂಕಿತ ಹಾಕಿದ್ದರು.
[ಕನ್ನಡಿಗ ಎಚ್ಎಲ್ ದತ್ತು ಪ್ರಮಾಣ ವಚನ

1983ರಿಂದ 1990 ತನಕ ಮಾರಾಟ ತೆರಿಗೆ ಇಲಾಖೆ ಪರ ವಕಾಲತ್ತು ವಹಿಸುವ ಸರ್ಕಾರಿ ವಕೀಲರಾಗಿದ್ದರು.
* 1992ರಿಂದ 1993ವರೆಗೆ ತೆರಿಗೆ ಇಲಾಖೆಯ ಹೆಚ್ಚುವರಿ ಸ್ಥಾಯಿ ವಕೀಲರಾಗಿದ್ದರು.
* 1993 ರಿಂದ 1995 ತೆರಿಗೆ ಇಲಾಖೆಯ ಸ್ಥಾಯಿ ಸಮಿತಿಯ ಸಿನೀಯರ್ ಕೌನ್ಸೆಲ್ ಆಗಿದ್ದರು.
* 1995ರ ಡಿ. 18ರಂದು ಕರ್ನಾಟಕ ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು.
* 2007ರ ಫೆ.12ರಂದು ಚಂಡೀಗಢ ಹೈಕೋರ್ಟಿನ ಮುಖ್ಯ ನ್ಯಾಯಧೀಶರಾದರು.
* 2007ರ ಮೇ 18ರಂದು ಕೇರಳ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾದರು.
* 2008ರ ಡಿ. 17ರಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದರು.
* 2008ರಿಂದ ಇಲ್ಲಿ ತನಕ ಸುಪ್ರೀಂಕೋರ್ಟಿನ ಹಾಲಿ ಜಡ್ಜ್ ಆಗಿದ್ದರು.
* ಸೆ.28, 2014ರಂದು ಸಿಜೆಐ ಆಗಿ ಪ್ರಮಾಣ ವಚನ ಸ್ವೀಕಾರ
* ಡಿ.2, 2015 ರ ತನಕ ಸಿಜೆಐಯಾಗಿ ಅಧಿಕಾರ.
* ಇತ್ತೀಚಿನ ವರ್ಷಗಳಲ್ಲಿ ದೀರ್ಘ ಅವಧಿ ಸಿಜೆಐ ಆಗುವ ಯೋಗ ದತ್ತು ಅವರಿಗೆ ಸಿಕ್ಕಿದೆ.
