ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಅಮ್ಟಾಡಿ ಗ್ರಾಮದ ಬಡಾಜೆಗುತ್ತು ಧರ್ಮಚಾವಡಿಯಲ್ಲಿ 2015ನೇ ಫೆ.4ರಿಂದ 10ರತನಕ ನಡೆಯಲಿರುವ ನಾಗಮಂಡಲ ಮತ್ತು ಧರ್ಮನೇಮದ ಪೂರ್ವಭಾವಿ ಸಭೆ ಭಾನುವಾರ ನಡೆಯಿತು.
ಅಮ್ಟಾಡಿ ಮಂಗ್ಲಿಮಾರ್ ಶ್ರೀ ಅಣ್ಣಪ್ಪ ಸ್ವಾಮಿ ದೈವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಎ. ರವಿಶಂಕರ ಶೆಟ್ಟಿ ಅವರು ವಿವಿಧ ರೂಪುರೇಷೆ ಬಗ್ಗೆ ಮಾತನಾಡಿದರು.
ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು.
ಬಂಟ್ವಾಳ ತಾಲೂಕು ಬಿಲ್ಲವರ ಸಮಾಜ ಸೇವಾ ಸಂಘದ ಸೇಸಪ್ಪ ಕೋಟ್ಯಾನ್, ಶೆಡ್ಯೆಗುತ್ತು ಮಂಜುನಾಥ ಭಂಡಾರಿ, ತೆಂಗು ಬೆಳೆಗಾರರ ಒಕ್ಕೂಟ ಅಧ್ಯಕ್ಷ ಪಿ. ರಾಜಶೇಖರ ರೈ, ಪೇರ್ಲಬೈಲು ರಾಜರಾಮ ಶೆಟ್ಟಿ, ಸುರೇಶ ಶೆಟ್ಟಿ, ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಮತ್ತಿತರರು ಮಾತನಾಡಿ, ಸಲಹೆ ಸೂಚನೆ ನೀಡಿದರು.
ಪ್ರಮುಖರಾದ ಬೆಳ್ತಂಗಡಿ ಶಾಸಕ ಕೆ.ವಸಂತ ಬಂಗೇರ, ಉದ್ಯಮಿ ಪ್ರಕಾಶ್ ಅಂಚನ್, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ. ಎಂ. ಕುಲಾಲ್, ಪ್ರಕಾಶ್ಚಂದ್ರ ಶೆಟ್ಟಿ ದೇವಸ್ಯ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮೇಲ್ವಿಚಾರಕಿ ಅಮಿತ, ಸ್ಕಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ವಕೀಲ ಅಶ್ವನಿ ಕುಮಾರ್ ರೈ, ಸಮಾಜ ಸೇವಾ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಕೆ.ದಯಾನಂದ ಬೆಳ್ಳೂರು, ಪ್ರಮುಖರಾದ ಹೊನ್ನಪ್ಪ ಕುಂದರ್, ಶಿವಶರಣ ಶೆಟ್ಟಿ, ಅಮ್ಟಾಡಿ ಗ್ರಾ.ಪಂ. ಸದಸ್ಯ ಜಯಂತ, ಉದ್ಯಮಿ ರಾಕೇಶ್ ಮಲ್ಲಿ, ಹೇಮನಾಥ ಶೆಟ್ಟಿ, ಸುಜೀರ್ಗುತ್ತು ಐತಪ್ಪ ಆಳ್ವ, ಕ್ಷೇತ್ರ ಬಿಜೆಪಿ ಅಧ್ಯಕ್ಷ ಜಿ. ಆನಂದ, ಉಪಾಧ್ಯಕ್ಷ ಪುರುಷ ಎನ್. ಸಾಲ್ಯಾನ್, ಪುರಸಭಾ ಸದಸ್ಯರಾದ ವಾಸು ಪೂಜಾರಿ, ಬಿ.ದೇವದಾಸ ಶೆಟ್ಟಿ, ಜಿ. ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಮಹಮ್ಮದಾಲಿ ಪುತ್ತೂರು, ತಾ.ಪಂ.ಸದಸ್ಯ ಬಿ. ಪದ್ಮಶೇಖರ ಜೈನ್, ಮಾಜಿ ಸದಸ್ಯ ಅವಿಲ್ ಮಿನೇಜಸ್, ಕೆಪಿಸಿಸಿ ಕಾರ್ಯದಶರ್ಿ ಪಿ.ವಿ.ಮೋಹನ್, ಬದ್ರುದ್ದೀನ್, ಕಿಶೋರ್ ಶೆಟ್ಟಿ ಎಮರ್ಾಳ್, ಕಾರ್ಯಕ್ರಮ ನಿವರ್ಾಹಕ ತಾರಾನಾಥ ಕೆ. ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *