ಕೈಕಂಬ : ಬಡಗಬೆಳ್ಳೊರು ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಧಾನದಲ್ಲಿ ಸೆ. 29 ರ ಭಾನುವಾರದಿಂದ ಅ.8 ಮಂಗಳವಾರದವರೆಗೆ ವರ್ಷಂಪ್ರತಿಯಂತೆ ನವರಾತ್ರಿ ಮಹೋತ್ಸವ ನಡೆಯಲಿದೆ. ಎಡಪದವು ದೇವಸ್ಥಾನದ ವಿಷ್ಣು ಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಪೂಜಾವಿಧಿವಿಧನಗಳು ನೆರವೇರಲಿದೆ. 28ರಿಂದ ಬೆಳಗ್ಗಿನಿಂದ ಮರುದಿನ ಬೆಳಗ್ಗಿನವರೆಗೆ ನಾನಾ ಭಜನಾ ಮಂಡಳಿಗಳಿಂದ ಏಕಾಹ ಭಜನೆ, ಚಂಡಿಕಾ ಹೋಮ, ಯಕ್ಷಗಾನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಕ್ಷೇತ್ರಾಧಿಕಾರಿ ಸಂದೀಪ್ ತಿಳಿಸಿದ್ದಾರೆ.
ಸೆ. 29 ಭಾನುವಾರ ಪೂರ್ವಾಹ್ನ 7 ಗಂಟೆಯಿಂದ ಪ್ರಾರ್ಧನೆ, ತೋರಣ ಮುಹೂರ್ತ, ಗಣಯಾಗ, ನವಕಲಶಾಭಿಷೇಕ, ಪ್ರಧಾನ ಹೋಮ, ಕಲಶ ಪ್ರತಿಷ್ಠೆ, ನವರಾತ್ರಿ ಪೂಜಾರಂಭ, ನಾಗತಂಬಿಲ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ. ಸೆ. 30 ಸೋಮವಾರ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 9 ಕ್ಕೆ ಕಲ್ಪೋಕ್ತಪೂಜೆ, ರಂಗಪೂಜೆ, ಗಣಪತಿ ದೇವರಿಗೆ ಅಪ್ಪದ ಪೂಜೆ, ಅನ್ನಸಂತರ್ಪಣೆ.
ಅ. 1 ಮಂಗಳವಾರ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಸಂಜೆ 6 ರಿಂದ ಯಕ್ಷಗಾನ – ಸಂಪೂರ್ಣ ಶ್ರೀ ದೇವೀ ಮಹಾತ್ಮೆ. ರಾತ್ರಿ 9 ಕ್ಕೆ ಕಲ್ಪೋಕ್ತಪೂಜೆ, ಅನ್ನಸಂತರ್ಪಣೆ . ಅ. 2 ಬುಧವಾರ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ರಾತ್ರಿ 9 ಕ್ಕೆ ಕಲ್ಪೋಕ್ತಪೂಜೆ,ರಂಗಪೂಜೆ, ಅನ್ನಸಂತರ್ಪಣೆ .
ಅ. 3 ಗುರುವಾರ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ . ಅ. 4 ಶುಕ್ರವಾರ ಪೂರ್ವಾಹ್ನ 8 ರಿಂದ ಚಂಡಿಕಾ ಹೋಮ, ಶಾರದಾ ಪ್ರತಿಷ್ಠೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 9 ಕ್ಕೆ ಕಲ್ಪೋಕ್ತಪೂಜೆ, ರಂಗಪೂಜೆ ಅನ್ನಸಂತರ್ಪಣೆ . ಅ. 5 ಶನಿವರ ಪೂರ್ವಾಹ್ನ 8 ರಿಂದ ಚಂಡಿಕಾ ಹೋಮ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 9 ಕ್ಕೆ ಕಲ್ಪೋಕ್ತಪೂಜೆ, ರಂಗಪೂಜೆ ನಂತರ ಸ್ಧಳೀಯ ಮಕ್ಕಳಿಂದ ವಿವಿಧ ವಿನೋದಾವಳಿಗಳು, ಅನ್ನಸಂತರ್ಪಣೆ .
ಅ. 6 ಭಾನುವಾರ ಬೆಳಿಗ್ಗೆ 7 ರಿಂದ ದೀನಬಂಧು ವಾಟ್ಸಾಪ್ ಗ್ರೂಪ್ ಇವರ ಸೇವಾರ್ಥವಾಗಿ ಸಾಮೂಹಿಕ ” ಸಂಜೀವಿನಿ ಮಹಾ ಮೃತ್ಯುಂಜಯಾ ಹೋಮ “ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 7 ರಿಂದ ಶ್ರೀ ಕಾವೇಶ್ವರ ಯಕ್ಷಗಾನ ಮಂಡಳಿ ಇದರ ಯುವ ಕಲಾವಿದರಿಂದ ಗುರುಗಳಾದ ದೇವದಾಸ್ ಅರ್ಕುಳ ಇವರ ನಿರ್ದೇಶನದಲ್ಲಿ ಯಕ್ಷಗಾನ ಬಯಲಾಟ ” ಕುಮಾರ ವಿಜಯ “.
ಅ. 7 ಸೋಮವಾರ ಬೆಳಿಗ್ಗೆ ಧರ್ಮದೈವಗಳಿಗೆ ಪರ್ವ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ. ಅ. 8 ಪೂರ್ವಾಹ್ನ 8 ಕ್ಕೆ ಕಲಶ ವಿಸರ್ಜನೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ. ಮಧ್ಯಾಹ್ನ 2 ರಿಂದ ಧರ್ಮಚಾವಡಿ ಭಜನಾ ತಂಡ ಮಂಗಳೂರು ಇವರಿಂದ ಭಜನೆ , ನಂತರ ಶಾರದಾ ಪೂಜೆ ಸಂಜೆ 6 ರಿಂದ ಅನ್ನಸಂತರ್ಪಣೆ. ನಂತರ ಭದ್ರಕಾಳಿ ಚೆಂಡೆ ಸೆಟ್,ನಂತೂರು ಪದವು ಇವರಿಂದ “ಚೆಂಡೆ ಸಿಂಗರಿ ಮೇಳ” ಬಳಿಕ ಜೈ ವೀರ ಮಾರುತಿ ವ್ಯಾಯಮಾ ಶಾಲೆ, ಬಡಗಬೆಳ್ಳೂರು ಇವರಿಂದ ತಾಲೀಮು ಪ್ರದರ್ಶನ ಹಾಗು ವಿವಿಧ ವೇಷ ವಿನೋದಾವಳಿಗಳೊಂದಿಗೆ ಶಾರದಾ ಮಾತೆಯ ಶೋಭಾಯಾತ್ರೆ ದೇವಸ್ಧಾನದಿಂದ ಹೊರಟು ಕೊಳತ್ತಮಜಲು ಎಕ್ಕುಂದ ಮಾರ್ಗವಾಗಿ ಫಲ್ಗುಣಿ ನದಿಯಲ್ಲಿ ವಿಸರ್ಜನೆ.

