ಬಂಟ್ವಾಳ:  ವಿವಿಧ ಕಲೆಗಳು ಅಡಕವಾಗಿರುವ ಮತ್ತು ಅತಿಹೆಚ್ಚು ಕಲಾವಿದರನ್ನು ಸಮಾಜಕ್ಕೆ ನೀಡಿದ್ದರೆ ಅದು ಕಲ್ಲಡ್ಕ ಎಂದು ತುಳುನಾಡ ಮಾಣಿಕ್ಯ ,ಖ್ಯಾತ ಹಾಸ್ಯ ಚಲನಚಿತ್ರ ನಟ  ಅರವಿಂದ ಬೋಳಾರ್  ತಿಳಿಸಿದ್ದಾರೆ.       ಬಿಲ್ಲವ ಸಮಾಜ ಸೇವಾ ಸಂಘ (ರಿ) ಕಲ್ಲಡ್ಕ ವಲಯದ ಆಶ್ರಯದಲ್ಲಿ ನಡೆದ ವಲಯಮಟ್ಟದ ಬಿಲ್ಲವ ಬಾಂಧವರ’ಕೆಸರ್ದ ಕಂಡೊಡು ಕುಸಲದ ಗೊಬ್ಬುಲು’ ಕೆಸರುಗದ್ದೆ ಕೂಟದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಅವರು ಮಾತನಾಡಿದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಒತ್ತಾಯಕ್ಕೆ ಮಣಿದು ಕೆಲವು ಹಾಸ್ಯ ಚಟಾಕಿಗಳನ್ನು ಹೇಳಿ ಕ್ರೀಡಾಭಿಮಾನಿಗಳನ್ನು ರಂಜಿಸಿದರು.
 ನರಿಕೊಂಬು ಗ್ರಾಮದ ಏರಮಲೆ ನಾಟಿ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದ ಪ್ರಧಾನ ಅರ್ಚಕ  ಕೇಶವ ಶಾಂತಿ ಖ್ಯಾತ ಜ್ಯೋತಿಷ್ಯ ಮನೋಜ್ ರವರು ಕ್ರೀಡಾಕೂಟದ ಗದ್ದೆಗೆ  ಫಲ,ತಾಂಬೂಲ ಇಟ್ಟು  ಹಾಲು ಎರೆದು ಕ್ರೀಡಾಕೂಟವನ್ನು ಉದ್ಘಾಟಿಸಿ ಶುಭ ಹಾರೈಸಿದರು .  ಮಾಜಿ ಶಾಸಕ ರುಕ್ಮಯ ಪೂಜಾರಿ ಅವರು ಸಭಾಧ್ಯಕ್ಷತೆ ವಹಿಸಿ ಸಂಘಟನೆ ಇದ್ದಾಗ ಮಾತ್ರ ಉತ್ತಮ ಕಾರ್ಯ ನಡೆಸಲು ಸಾಧ್ಯವಾಗುತ್ತದೆ.
IMG-20190923-WA0037
ಈ ನಿಟ್ಟಿನಲ್ಲಿ ಬಿಲ್ಲವ ಸಮಾಜದ ಯುವಕರು ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ  ಮುಂದೆ ಬರಬೇಕು ಎಂದು ಕರೆ ನೀಡಿದರು. ಜಿಲ್ಲಾ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ನಾರಾಯಣ ಪೂಜಾರಿ,  ಡಾಕ್ಟರ್ ವಿದ್ಯಾಸಾಗರ್,ತುಳು ಚಲನಚಿತ್ರ ನಿರ್ದೇಶಕ ರಂಜಿತ್ ಸುವರ್ಣ,ಬಂಟ್ವಾಳ ಯುವವಾಹಿನಿ ಅಧ್ಯಕ್ಷ  ಇಂದಿರೇಶ ,   ತುಳುನಾಡ ಬಿರುವೆರ್ ಸ್ಥಾಪಕಾಧ್ಯಕ್ಷ ಲೋಕೇಶ್ ಕೋಡಿಕೆರೆ  ಲೋಕೇಶ್ ಪೂಜಾರಿ ನರಹರಿ ನಗರ ,ಸುಂದರ ರಾಕ್ ಲೈನ್ ನರಹರಿ ನಗರ, ಶರತ್ ಕುಮಾರ್ ಅಮ್ಟೂರು, ಕೃಷ್ಣಪ್ಪ ಪೂಜಾರಿ ತೋಟ ,ಗುರುರಾಜ್ ಬಂಟ್ವಾಳ ,ಸಂಜೀವ ಪೂಜಾರಿ ,ಚಂದ್ರಶೇಖರ್ ಟೈಲರ್ ಗೋಳ್ತಮಜಲು,ಶರತ್ ಸೇನೆರೇಕೋಡಿ, ವಸಂತ ವಸುಧ  ಗೋಳ್ತಮಜಲು, ಮಹಾಬಲ ಮುಳಿ ಕೊಡಂಗೆ, ಚಂದ್ರಶೇಖರ್ ಬಂಗೇರ ಬಾಯಿಲ, ಜನಾರ್ಧನ ಪೂಜಾರಿ ಗೋಲಿಮಾರ್, ಗಂಗಾಧರ ಕೆ ಕಲ್ಲಡ್ಕ ಹಾಗೂ ಕ್ರೀಡಾಕೂಟ ಗದ್ದೆಯ ಮಾಲಕರಾದ ದಿ. ಚಂದ್ರಾವತಿ ಪೂಜಾರ್ತಿ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.  ಮೋನಪ್ಪ ದೇವಸ್ಯ ಸ್ವಾಗತಿಸಿದರು. ವಸಂತ ಬಟ್ಟ ಹಿತ್ತಿಲು ವಂದಿಸಿದರು .
ಬಳಿಕ ಮಕ್ಕಳು, ಮಹಿಳೆಯರು, ಪುರುಷರಿಗೆ ವಿವಿಧ  ಕ್ರೀಡಾಕೂಟಗಳು ನಡೆಯಿತು.ಬಂಟ್ವಾಳ ತಾ.ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್,ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ,ಲಕ್ಷ್ಮೀಶ ಸುವರ್ಣ, ತಾಪಂ ಸದಸ್ಯ ಸಂಜೀವ ಪೂಜಾರಿ ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ, ಶ್ರೀನಿವಾಸ ಪೂಜಾರಿ, ಮಿಥುನ್ ಪೂಜಾರಿ ಹೊಸಮನೆ ,ಮೊದಲಾದವರು ಅಗಮಿಸಿ ಶುಭಕೋರಿದರು .
ಸಂಜೆ ವಲಯ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಯವರ ಅಧ್ಯಕ್ಷತೆಯಲ್ಲಿ ನಡೆದ  ಸಮರೋಪ ಸಮಾರಂಭದಲ್ಲಿ  ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.  ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉದ್ಯಮಿ ಸಾಗರ್ ಸುವರ್ಣ ,ಲೋಕೇಶ್ ಸುವರ್ಣ ಕೃಷ್ಣ ಕೊಡಿ ,ಚೆನ್ನಪ್ಪ ಕೋಟ್ಯಾನ್ ತೋಟ ,ಸುರೇಂದ್ರ ಅಮೀನ್ ಮರಕಡ ಬೈಲು, ಪ್ರಕಾಶ್ ಕುರ್ಮನ್ ಯತಿನ್ ಎಳ್ತಿ ಮಾರ್ ,ಸಾಲಿಯಾನ್ ಕಲ್ಲಡ್ಕ, ಚೇತನ್ ಮೆಲ್ಕಾರ್ ,ಪುರುಷೋತ್ತಮ ಸಾಲಿಯಾನ್ ಮಂಚಿ, ಕಿಶೋರ್ ಕಟ್ಟೆ ಮಾರ್, ದಯಾನಂದ ಸತ್ಯಶ್ರೀ ಕಲ್ಲಡ್ಕ , ಪುಷ್ಪ ಸತೀಶ್  ಸೇವಾ ಪ್ರತಿನಿಧಿ ಸುಜಾತ  , ರಾಜೇಶ್ ಸುವರ್ಣ ಕೃಷ್ಣ ಕೊಡಿ, ಜಯಪ್ರಕಾಶ್  ತಕ್ಕಿಪಾಪು ,ಯತಿನ್ ಕುಮಾರ್ ಬೊಂಡಾಲ, ರವಿ ಸುವರ್ಣ , ರಮೇಶ್  ಪೂಜಾರಿ  ಉಪಸ್ಥಿತರಿದ್ದರುದಿನೇಶ್ ಸುವರ್ಣ ರಾಯಿ, ಶರತ್ ಪೂಜಾರಿ ಅಡ್ವೆ, ಉದಯ ಕೆಲಿಂಜ,  ಸಂತೋಷ್ ಬೋಲ್ಪೋಡಿ ನಿರೂಪಿಸಿದರು

By suddi9

Leave a Reply

Your email address will not be published. Required fields are marked *