ವಿಟ್ಲ : ವಿಶ್ವಬ್ರಾಹ್ಮಣ ಸೇವಾ ಸಂಘದ 23 ನೇ ವರ್ಷದ ಶ್ರೀ ವಿಶ್ವಕರ್ಮ ಪೂಜೆಯು ಹನುಮಗಿರಿ ಶ್ರೀರಾಮ ಮಂದಿರದ ಫಲಿಮಾರು ವಿಠಲ್ ಪೈ ಸ್ಮಾರಕ ಸಭಾ ಭವನದಲ್ಲಿ ನಡೆಯಿತು.
.ಈ ಕಾರ್ಯಕ್ರಮದಲ್ಲಿ ಮಂಗಳೂರು ಶ್ರೀ ಕಾಳಿಕಾಂಭ ವಿನಾಯಕ ದೇವಸ್ಥಾನದ 2 ನೇ ಮೊಕ್ತಾಸರ ಬೆಳುವಾಯಿ ಸುಂದರ ಆಚಾರ್ಯ, ವಿಟ್ಲ ವಿಶ್ವಬ್ರಾಹ್ಮಣ ಸೇವಾ ಸಂಘದ ಗೌರವಾಧ್ಯಕ್ಷ ಕೆ ಪುತ್ತೂರಾಯ ಆಚಾರ್ಯ, ಅಧ್ಯಕ್ಷ ಕೆ ಸದಾಶಿವ ಆಚಾರ್ಯ ಕೈಂತಿಲ, ಕಾರ್ಯದರ್ಶಿ ಪ್ರದೀಪ್ ಆಚಾರ್ಯ ಕೆ, ಉಪಾಧ್ಯಕ್ಷ ಎನ್ ಪ್ರಭಾಕರ ಆಚಾರ್ಯ, ಕೋಶಾಧಿಕಾರಿ ಪುರಂದರ ಆಚಾರ್ಯ ಎನ್, ಜತೆಕಾರ್ಯದರ್ಶಿ ಎನ್ ಸತೀಶ್ ಆಚಾರ್ಯ ನೆತ್ರಕೆರೆ, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

