ಬಂಟ್ವಾಳ :  ಸಜಿಪ ಪಡು ಗ್ರಾಮದ ಇಡುಪಡಪು ಎಂಬಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಜುಗಾರಿ ಆಟದಲ್ಲಿ ನಿರತರಾಗಿದ್ದ ಆರು ಮಂದಿಯನ್ನು ಬಂಧಿಸಿದ್ದಾರೆ. ಸ್ಥಳೀಯರಾದ ಸುನೀಲ್,  ನಾರಾಯಣ ಪೂಜಾರಿ, ಬದ್ದುದ್ದಿನ್,ಭರತ್ ರಾಜ್,ಲಕ್ಷ್ಮೀಶ, ಅಶೋಕ ಎಂಬವರನ್ನು ಬಂಧಿಸಲಾಗಿದೆ. ಈ ಸಂದರ್ಭದಲ್ಲಿ  ಬಂಧಿತರಿಂದ ಆಟಕ್ಕೆ ಪಣವಾಗಿಟ್ಟಿದ್ದ 10,500 ರೂ.ನಗದು,ಇಸ್ಪೀಟ್ ಎಲೆಯನ್ನು ಪೊಲೀಸರು ವಶಪಡೊಸಿದ್ದಾರೆ. ಖಚಿತ ವರ್ತಮಾನದ ಮೇರೆಗೆ      ಬಂಟ್ಟಾಳ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ ಐ ಪ್ರಸನ್ನ ಮತ್ತವರ ಸಿಬಂದಿಗಳು ಈ ದಾಳಿ ಕಾರ್ಯಾ ಚರಣೆ ನಡೆಸಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.

By suddi9

Leave a Reply

Your email address will not be published. Required fields are marked *