ಬೆಂಗಳೂರು : ಮನೋವೈದ್ಯಕೀಯ ಕ್ಷೇತ್ರದ ಉನ್ನತ ಸಾಧಕರಿಗೆ ಇಂಗ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಸೈಕ್ರಿಯಾರ್ಟಿಸ್ಟ್‌ ನೀಡುವ ಜಾಗತಿಕ ಮಟ್ಟದ ಪ್ರತಿಷ್ಠಿತ ಪ್ರಶಸ್ತಿಗೆ ಬೆಂಗಳೂರು ಮೂಲದ ಮನೋವೈದ್ಯೆ ಡಾ.ರಮ್ಯಾ ಮೋಹನ್ ನಾಮನಿರ್ದೇಶನಗೊಂಡಿದ್ದಾರೆ. ಬೆಂಗಳೂರು ವೈದ್ಯಕೀಯ ಕಾಲೇಜಿನ ಹಳೇ ವಿದ್ಯಾರ್ಥಿ ಮತ್ತು ಕಲಾವಿದೆ ಆಗಿರುವ ಡಾ.ರಮ್ಯಾ, 2019ರ ಮನೋವೈದ್ಯಕೀಯ ಸಂವಹನ ವಿಭಾಗದ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಮೂವರು ವೈದ್ಯರಲ್ಲಿ ಒಬ್ಬರಾಗಿದ್ದಾರೆ.Dr Ramya Mohan at the UN SDG Champions Summit , Finland ,2019

ಜಾಗತಿಕ ಮಾನಸಿಕ ಆರೋಗ್ಯ ಪ್ರವರ್ತಕಿಯಾಗಿರುವ ಡಾ.ರಮ್ಯಾ, ವಿಶ್ವ ಮನೋವೈದ್ಯಶಾಸ್ತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ 2018ರಲ್ಲಿ ರಾಯಲ್‌ ಕಾಲೇಜ್‌ ಫೆಲೋಶಿಪ್‌ನ್ನು ಕೂಡ ಪಡೆದಿದ್ದರು. ನರವಿಜ್ಞಾನ, ಮಾನಸಿಕ ಆರೋಗ್ಯ ಮತ್ತು ಸಂಗೀತ ಸೇರಿ ಸೃಜನಶೀಲ ಕಲೆಗಳನ್ನು ಸಂಯೋಜಿಸುವ ಜಾಗತಿಕ ಪ್ರವರ್ತಕರಾಗಿರುವ ಡಾ.ರಮ್ಯಾ, ಸಮುದಾಯ ಅಭಿವೃದ್ಧಿ ಯೋಜನೆಗಳ ಮೂಲಕ ಜನರಿಗೆ ಜಾಗೃತಿ ಮೂಡಿಸುತ್ತಿದ್ದು, ಸಂಗೀತ ಆಧಾರಿತ ಮಾನಸಿಕ ಚಿಕಿತ್ಸಾ ವಿಧಾನ ‘ಕೇಪ್‌’ ಬಳಕೆಯಲ್ಲಿ ಪ್ರಮುಖರಾಗಿದ್ದಾರೆ._0067_fellows_19

ಪ್ರತಿಷ್ಠಿತ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ನಂತರ ಪ್ರತಿಕ್ರಿಯಿಸಿದ ಡಾ.ರಮ್ಯಾ ಮೋಹನ್, ಇದು ಹೆಮ್ಮೆಯ ಸಂಗತಿಯಾಗಿದ್ದು, ಮನೋವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಇಂಗ್ಲೆಂಡ್ ಗುರುತಿಸಿದೆ. ಇದರಿಂದ ಎಲ್ಲರಿಗೂ ಉತ್ತಮ ಮಾನಸಿಕ ಆರೋಗ್ಯ ನೀಡುವ ಕಾರ್ಯ ಮಾಡಲು ನನಗೆ ಹೊಸ ಶಕ್ತಿ ಬಂದಂತಾಗಿದೆ. ನನ್ನ ಈ ಕಾರ್ಯ ಮುಂದುವರಿಯುತ್ತದೆ  ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಮಾಧ್ಯಮ, ಸಮುದಾಯ ಕಾರ್ಯಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಮನೋವೈದ್ಯಕೀಯ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಿದ ವ್ಯಕ್ತಿಗಳನ್ನು ಗುರುತಿಸುವ ಸಲುವಾಗಿ ನೀಡುವ ಆರ್‌ಸಿಪಿಸೈಕ್‌ ಪ್ರಶಸ್ತಿ ವಿಭಾಗದಲ್ಲಿ ಡಾ.ರಮ್ಯಾ ಮೋಹನ್ ನಾಮನಿರ್ದೇಶನಗೊಂಡಿದ್ದಾರೆ.

ಜಾಗತಿಕ ಮಟ್ಟದಲ್ಲಿ ಮಾನಸಿಕ ಆರೋಗ್ಯ ರಕ್ಷಣೆಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು ಮತ್ತು ತಂಡಗಳ ಶ್ಲಾಘನೀಯ ಕಾರ್ಯವನ್ನು ಗುರುತಿಸುವ ಸಲುವಾಗಿ ರಾಯಲ್‌ ಕಾಲೇಜ್‌ ಆಫ್‌ ಸೈಕ್ರಿಯಾರ್ಟಿಸ್ಟ್‌ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಒಟ್ಟು 17 ವಿಭಾಗದಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ನವೆಂಬರ್‌ನಲ್ಲಿ ವಿಜೇತರನ್ನು ಘೋಷಿಸಲಾಗುತ್ತದೆ.

ಇಂಗ್ಲೆಂಡ್‌ ಮತ್ತು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಿರುವ ಇವರು, ಪ್ರಸ್ತುತ ಭಾರತದಲ್ಲಿ ಸಮುದಾಯದ ಅಭಿವೃದ್ಧಿ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಮಕ್ಕಳು ಮತ್ತು ಯುವಜನತೆಯಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತಾ, ಎಲ್ಲರಿಗೂ ಗುಣಮಟ್ಟದ ಮಾನಸಿಕ ಆರೋಗ್ಯ ದೊರೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಬ್ಬರು ಮಕ್ಕಳ ತಾಯಿಯಾಗಿರುವ ಡಾ.ರಮ್ಯಾ ತಮ್ಮ ವೈದ್ಯಕೀಯ ಅಭ್ಯಾಸದ ಭಾಗವಾಗಿ ಅನೇಕ ಸಂಕೀರ್ಣ ಪ್ರಕರಣಗಳನ್ನು ಭಾರತದಲ್ಲಿ ನಿರ್ವಹಿಸಿದ್ದಾರೆ.

ದಕ್ಷಿಣ ಲಂಡನ್‌ನಲ್ಲಿರುವ ವಿಶ್ವದ ಪ್ರಮುಖ ಮಾನಸಿಕ ಆರೋಗ್ಯ ಸಂಸ್ಥೆ ಮೌಡ್ಸ್ಲೆ ಎನ್‌ಎಚ್ಎಸ್‌ ಆಸ್ಪತ್ರೆಯ ಟ್ರಸ್ಟ್‌ನಲ್ಲಿ ಜನರಲ್‌ ಸೈಕಿಯಾಟ್ರಿ ತರಬೇತಿಯನ್ನು ಪೂರ್ಣಗೊಳಿಸಿದರು. ಎಂಆರ್‌ಸಿಸೈಕ್‌ ಪೂರ್ಣಗೊಳಿಸಿದ ಅತ್ಯಂತ ಕಿರಿಯ ವೈದ್ಯೆ ಎಂಬ ಹೆಗ್ಗಳಿಕೆ ಡಾ.ರಮ್ಯಾಗೆ ಸಲ್ಲುತ್ತದೆ. ಈ ಎಂಆರ್‌ಸಿಸೈಕ್‌ ಪರೀಕ್ಷೆ ಇಂಗ್ಲೆಂಡ್‌ನಲ್ಲಿ ಅತ್ಯಂತ ಕಷ್ಟಕರವಾದ ಸ್ನಾತಕೋತ್ತರ ಪರೀಕ್ಷೆಯಾಗಿದೆ. ರಾಯಲ್ ಕಾಲೇಜ್ ಆಫ್ ಸೈಕಿಯಾಟ್ರಿಸ್ಟ್ಸ್‌ನ ಸದಸ್ಯೆಯಾದ ನಂತರ ಲಂಡನ್‌ನ ವಿಶ್ವಪ್ರಸಿದ್ಧ ಅನಾರೋಗ್ಯ ಪೀಡಿತ ಮಕ್ಕಳಿಗಾಗಿರುವ ಗ್ರೇಟ್ ಒರ್ಮಂಡ್ ಸ್ಟ್ರೀಟ್ ಆಸ್ಪತ್ರೆಯಲ್ಲಿ ಡೆವಲಪ್‌ಮೆಂಟಲ್ ಸೈಕಿಯಾಟ್ರಿ (ಮಕ್ಕಳು, ಹದಿಹರೆಯದವರು, ಯುವಕರು ಮತ್ತು ಕುಟುಂಬಗಳ ಮನೋವೈದ್ಯಶಾಸ್ತ್ರ)ದಲ್ಲಿ ಪರಿಣಿತಿ ಪಡೆದರು.

By suddi9

Leave a Reply

Your email address will not be published. Required fields are marked *