ಕೋಲಾರ:- ಬೆಂಗಳೂರಿನ ಶೇಷಾದ್ರಿಪುರಂನ ಅಪೊಲೊ ಹಾಸ್ಪಿಟಲ್ನಲ್ಲಿ ಬೈಲೇಟರಲ್ ನೀ ರೀಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ತಮ್ಮ ಸಹೋದರ ಸತ್ಯನಾರಾಯಣರಾವ್ ಗಾಯ್ಕವಾಡ್ ಅವರನ್ನು ಸೂಪರ್ ಸ್ಟಾರ್ ರಜಿನಿಕಾಂತ್ ಬುಧವಾರ ಭೇಟಿ ಮಾಡಿದರು. 77 ವರ್ಷದ ಸತ್ಯನಾರಾಯಣರಾವ್ ಗಾಯ್ಕವಾಡ್ ಅವರು ತಮ್ಮ ಮಂಡಿಯಲ್ಲಿ ಗಂಭೀರವಾದ ಅಸ್ಥಿ ಸಂಧಿವಾತ (ಓಸ್ಟಿಯೊಆರ್ಥರೈಟೀಸ್-ಓಎಸ್) ಸಮಸ್ಯೆಯಿಂದ ಬಳಲುತ್ತಿದ್ದು, ಬಹಳ ಕಾಲದಿಂದ ಅವರಿಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ.
ಸತ್ಯನಾರಾಯಣ ಅವರು ಈಗ ಆರಾಮವಾಗಿದ್ದಾರೆ ಮತ್ತು ಶಸ್ತ್ರಚಿಕಿತ್ಸೆಗೆ ಒಳಗಾದ ದಿನವೇ ನಡೆಯಲು ಅವರಿಗೆಸಾಧ್ಯವಾಗಿದೆ. ಮಂಡಿ ಮರು ಜೋಡಣೆ ಶಸ್ತ್ರ್ರಚಿಕಿತ್ಸೆಗೆ ಒಳಗಾದ ನನ್ನ ಎಲ್ಲ ರೋಗಿಗಳು ಚಿಕಿತ್ಸೆಗೆ ಒಳಗಾದ ದಿನ ಸಂಜೆ ವೇಳೆಗೆ ನಡೆಯಲು ಸಾಧ್ಯವಾಗಿದೆ, 14 ದಿನಗಳ ನಂತರ ಹೊಲಿಗೆಗಳನ್ನು ತೆಗೆಯಲಾಗುತ್ತದೆ, ಮೂರುವಾರಗಳ ಬಳಿಕ ರೋಗಿಯು ಸ್ವಯಂ ಆಗಿ ಒಂದು ಕಿ.ಮೀ.ವರೆಗೆ ನಡೆಯಲು ಶಕ್ತರಾಗಿರುತ್ತಾರೆ. ಜತೆಜತೆಗೆ ನಿರಂತರವಾದ ದೈಹಿಕ ವ್ಯಾಯಾಮದ ಅಗತ್ಯವಿರುತ್ತದೆ. ನನ್ನ ರೋಗಿಗಳು ಪ್ರತಿದಿನ 3ರಿಂದ 5ಕೀ.ಮೀ.ಗಳವರೆಗೆ ನಡೆಯಬಲ್ಲರು ಹಾಗೂ ಅವರು ಗುಣಮಟ್ಟದ ಜೀವನ ನಡೆಸುತ್ತಿದ್ದು, ನೋವುರಹಿತ ಮತ್ತು ಸಂಸತಸಕರ ಜೀವನನಡೆಸುತ್ತಿದ್ದಾರೆ ಎಂದು ಬೆಂಗಳೂರಿನ ಶೇಷಾದ್ರಿಪುರಂ ಅಪೊಲೊ ಹಾಸ್ಪಿಟಲ್ನ ಕನ್ಸಲ್ಟೆಂಟ್ ಆರ್ಥೋಪೆಡಿಕ್ ಸರ್ಜನ್ ಡಾ.ಕಿರಣ್ ಚೌಕ ತಿಳಿಸಿದರು.
